ತುಮಕೂರು: ಮಾಧ್ಯಮಗಳ ಕಣ್ತಪ್ಪಿಸಿ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದ ಐಟಿ ಅಧಿಕಾರಿಗಳು ಸತತ 60 ಗಂಟೆಗಳ ಕಾಲ ಪರಿಶೀಲನೆಯಲ್ಲಿ ತೊಡಗಿದ್ದು, ಇದೀಗ ತಮ್ಮ ಕಾರ್ಯಾಚರಣೆ ಮುಕ್ತಾಯಗೊಳಿಸಿದ್ದಾರೆ.
ಸತತ 60 ಗಂಟೆ ಪರಿಶೀಲನೆ: ಮೆಡಿಕಲ್ ಕಾಲೇಜಿನಿಂದ ಹೊರಟ ತೆರಿಗೆ ಅಧಿಕಾರಿಗಳು - ಐಟಿ ದಾಳಿ ಸುದ್ದಿ
ಮಾಧ್ಯಮಗಳ ಕಣ್ಣು ತಪ್ಪಿಸಿ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದ ಐಟಿ ಅಧಿಕಾರಿಗಳು ಸತತ 60 ಗಂಟೆಗಳ ಕಾಲ ಪರಿಶೀಲನೆಯಲ್ಲಿ ತೊಡಗಿದ್ದು, ಇದೀಗ ತಮ್ಮ ಕಾರ್ಯಾಚರಣೆ ಮುಕ್ತಾಯಗೊಳಿಸಿದ್ದಾರೆ.
ಇದುವರೆಗೆ ಮೆಡಿಕಲ್ ಕಾಲೇಜಿನಲ್ಲಿ ಮೂರು ದಿನಗಳಿಂದ ಸುಮಾರು 19 ಮಂದಿ ಅಧಿಕಾರಿಗಳ ತಂಡ ಎಲ್ಲಾ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಆಪ್ತ ರಮೇಶ್ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯುತ್ತಿದ್ದಂತೆ, ಮೆಡಿಕಲ್ ಕಾಲೇಜಿನಲ್ಲಿದ್ದ ಐಟಿ ಅಧಿಕಾರಿಗಳು ಕೆಲಕಾಲ ಗಲಿಬಿಲಿಗೊಂಡರು ಎನ್ನಲಾಗುತ್ತಿತ್ತು.
ಇನ್ನೋವಾ ಕಾರುಗಳಲ್ಲಿ ಬಂದಿದ್ದ ಅಧಿಕಾರಿಗಳು ಮೆಡಿಕಲ್ ಕಾಲೇಜಿನ ಮುಂಭಾಗದ ಬಾಗಿಲಿನಿಂದ ಹೊರಗೆ ಬಾರದೆ ಕಾಲೇಜಿನ ಬೇರೊಂದು ಬಾಗಿಲಿಂದ ಮಾಧ್ಯಮಗಳ ಕಣ್ಣುತಪ್ಪಿಸಿ ಹೊರಟು ಹೋಗಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಭದ್ರತೆ ದೃಷ್ಟಿಯಿಂದ ಹಿಂಬದಿ ಬಾಗಿಲಿನಿಂದ ಪೊಲೀಸರು ಅಧಿಕಾರಿಗಳನ್ನು ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.