ಕರ್ನಾಟಕ

karnataka

ETV Bharat / city

ಕೇಂದ್ರದ ಸಹಕಾರ ಇಲ್ದೇ ರಾಜ್ಯದಲ್ಲಿ ಆಳ್ವಿಕೆ ಮಾಡ್ತೇವೆ ಎಂಬುದು ಮೂರ್ಖತನ: ನಾರಾಯಣಸ್ವಾಮಿ - ಗೊಲ್ಲರಹಟ್ಟಿ

ಕೇಂದ್ರದ ಸಹಕಾರ ಇಲ್ಲದೆ ರಾಜ್ಯದಲ್ಲಿ ಆಳ್ವಿಕೆ ಮಾಡುತ್ತೇವೆ ಎಂಬುದು ಅವರ ಮೂರ್ಖತನ. ಖಂಡಿತವಾಗಲೂ ಕೇಂದ್ರ ಎಲ್ಲ ರೀತಿಯ ಸಹಕಾರವನ್ನು ರಾಜ್ಯಕ್ಕೆ ನೀಡಲಿದೆ ಎಂದು ನೆರೆ ಪ್ರವಾಹಕ್ಕೆ ಕೇಂದ್ರದ ಅನುದಾನ ಬೇಡ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಸಂಸದ ಎ.ನಾರಾಯಣಸ್ವಾಮಿ ಪ್ರತಿಕ್ರಿಯಿಸಿದರು.

ಸಂಸದ ಎ.ನಾರಾಯಣಸ್ವಾಮಿ

By

Published : Sep 21, 2019, 8:22 PM IST

ತುಮಕೂರು:ಕೇಂದ್ರದ ಸಹಕಾರ ಇಲ್ಲದೆ ರಾಜ್ಯದಲ್ಲಿ ಆಳ್ವಿಕೆ ಮಾಡುತ್ತೇವೆ ಎಂಬುದು ಅವರ ಮೂರ್ಖತನ. ಖಂಡಿತವಾಗಲೂ ಕೇಂದ್ರ ಎಲ್ಲ ರೀತಿಯ ಸಹಕಾರವನ್ನು ರಾಜ್ಯಕ್ಕೆ ನೀಡಲಿದೆ. ರಾಷ್ಟ್ರದ ಹಲವು ಭಾಗಗಳಲ್ಲಿ ನೆರೆಹಾವಳಿ ಉಂಟಾಗಿದ್ದು, ಅದನ್ನೆಲ್ಲ ಪರಿಶೀಲಿಸಿ ಕೇಂದ್ರ ಪರಿಹಾರ ನೀಡಲಿದೆ ಎಂದುಸಂಸದ ಎ.ನಾರಾಯಣಸ್ವಾಮಿ ಹೇಳಿದ್ರು.

ಉತ್ತರ ಕರ್ನಾಟಕದ ನೆರೆ ಪ್ರವಾಹಕ್ಕೆ ಕೇಂದ್ರದ ಅನುದಾನ ಬೇಡ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.

ಸಂಸದ ಎ.ನಾರಾಯಣಸ್ವಾಮಿ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಯಾಂಗದ ಬಗ್ಗೆ ನ್ಯಾಯಾಂಗಗಳೇ ತೀರ್ಮಾನ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ಮುಕ್ತವಾಗಿ ಅನರ್ಹರ ಶಾಸಕರ ಜೊತೆ ಚರ್ಚೆ ನಡೆಸಲಿದ್ದಾರೆ. ರಾಜ್ಯ ಸರ್ಕಾರ ಇನ್ನೂ ಮೂರುವರೆ ವರ್ಷಗಳ ಕಾಲ ಆಡಳಿತ ಮಾಡುವ ಮೂಲಕ ರಾಜ್ಯವನ್ನು ಅಭಿವೃದ್ಧಿ ಮಾಡುವಲ್ಲಿ ಎಲ್ಲರ ಸಹಕಾರದೊಂದಿಗೆ ಚುನಾವಣೆ ಎದುರಿಸಲಿದೆ. ಅಷ್ಟರೊಳಗೆ ಅನರ್ಹ ಶಾಸಕರಿಗೆ ಮುಕ್ತಿ ದೊರೆಯಲಿದೆ ಎಂಬ ವಿಶ್ವಾಸವಿದೆ. ಚುನಾವಣಾ ನೀತಿ ಸಂಹಿತೆಗೂ ನ್ಯಾಯಾಲಯದ ತೀರ್ಪಿಗೂ ಯಾವುದೇ ಸಂಬಂಧವಿಲ್ಲ ಎಂದರು.

ಅನರ್ಹ ಶಾಸಕರು ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ ಅವರ ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ಬಿಜೆಪಿ ಪಕ್ಷದ ವತಿಯಿಂದ ಸ್ಪರ್ಧಿಸಲಿದ್ದಾರೆ. ಅಧಿಕಾರ, ಚುನಾವಣೆ ಯಾವುದೂ ಅಂತಿಮವಲ್ಲ, ರಾಜ್ಯವನ್ನು ಕಟ್ಟಬೇಕು, ಆಳಬೇಕು. ರಾಜ್ಯದ ಅಭಿವೃದ್ಧಿಯ ಬಗ್ಗೆ ಆಲೋಚಿಸಬೇಕು, ಅಭಿವೃದ್ಧಿಗಾಗಿ ರಾಜಕಾರಣ ಮಾಡುವುದು ನಮ್ಮ ಉದ್ದೇಶ. ಮುಂದೆ ನಡೆಯಲಿರುವ ಉಪಚುನಾವಣೆಯಲ್ಲಿ 17 ಸ್ಥಾನವನ್ನು ಗೆಲ್ಲಲು ಪ್ರಯತ್ನ ಮಾಡಲಾಗುವುದು ಎಂದರು.

ಸೋಮವಾರ ಮತ್ತೆ ಗೊಲ್ಲರಹಟ್ಟಿಗೆ ಹೋಗಲಿದ್ದೇನೆ. ಕೆಲ ದಿನಗಳಿಂದ ಶಿರಾ, ಚಳ್ಳಕೆರೆ, ಹಿರಿಯೂರು, ಹೊಸದುರ್ಗ, ಪಾವಗಡ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಸರ್ಕಾರಿ ಶಾಲೆಗಳ ಅಥವಾ ಗ್ರಾಮಗಳ ಅಭಿವೃದ್ಧಿಗೆ ಎನ್.ಜಿ.ಒ ಸಂಸ್ಥೆಗಳಿಗೆ ದತ್ತು ನೀಡಲು ಈಗಾಗಲೇ ಚರ್ಚೆ ನಡೆಸಿದ್ದೇನೆ. ಗೊಲ್ಲರಹಟ್ಟಿಯು ಅಭಿವೃದ್ಧಿಯಾಗಬೇಕು ಎಂಬುದರ ಬಗ್ಗೆ ನನ್ನ ಬಳಿ ವರದಿ ಇತ್ತು. ಹದಿನೈದು ವರ್ಷಗಳಿಂದ ವಿದ್ಯುತ್ ವ್ಯವಸ್ಥೆ ಇಲ್ಲದೇ ಅಲ್ಲಿನ ಜನ ಜೀವನ ಸಾಗಿಸುತ್ತಿದ್ದಾರೆ. ಅವರಲ್ಲಿ ಇನ್ನು ಮೂಢನಂಬಿಕೆ ಹಾಗೆಯೇ ಇದೆ ಎಂದು ತಿಳಿದು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಅಂತಹ ಪ್ರದೇಶಗಳಿಗೆ ಹೋಗಿದ್ದೆ. ಅವರೇನು ನನಗೆ ಪ್ರವೇಶಿಸಲು ಅಡ್ಡಿ ಪಡಿಸಲಿಲ್ಲ, ಅವರಲ್ಲಿರುವ ಸಂಪ್ರದಾಯದ ಬಗ್ಗೆ ತಿಳಿಸಿದರು. ಅವರ ಸಂಪ್ರದಾಯಕ್ಕೆ ತೊಂದರೆಯಾಗಬಾರದು ಎಂದು ಸ್ಪಂದಿಸುವ ಮೂಲಕ ಅಲ್ಲಿಂದ ನಾನು ಹೊರಟು ಹೋದೆ ಎಂದರು.

ಶತ್ರು ಮನೆಗೆ ಹೋಗಿ ಹೃದಯ ಗೆಲ್ಲುವ ನಾರಾಯಣಸ್ವಾಮಿ ನಾನು:

ಸರ್ಕಾರಿ ಶಾಲೆಗಳು ಕಸದ ತೊಟ್ಟಿಯ ರೀತಿ ಇರುವುದನ್ನು ನೋಡಿದ್ದೇನೆ. ದೇಶ, ರಾಜ್ಯ, ಜಿಲ್ಲೆಗಳು ಅಭಿವೃದ್ಧಿಯಾಗ ಬೇಕೆಂದರೆ ಮೊದಲು ಸರ್ಕಾರಿ ಶಾಲೆಗಳು ಅಭಿವೃದ್ಧಿ ಆಗಬೇಕು ಆ ನಿಟ್ಟಿನಲ್ಲಿ ನಾನು ಕಾರ್ಯಪ್ರವೃತ್ತರಾಗಿದ್ದೇನೆ. ನಂತರದಲ್ಲಿ ಪ್ರತಿವರ್ಷ 10 ಗೊಲ್ಲರಹಟ್ಟಿಗಳನ್ನು ಅಭಿವೃದ್ಧಿಪಡಿಸಲಿದ್ದೇನೆ. ಗೊಲ್ಲರಹಟ್ಟಿಯ ಸಂಪ್ರದಾಯದ ಜೊತೆಗೆ ಅವರನ್ನು ಶಿಕ್ಷಿತರನ್ನಾಗಿಸಬೇಕು, ಆ ನಿಟ್ಟಿನಲ್ಲಿ ಈಗಾಗಲೇ ಅನೇಕ ಅಧಿಕಾರಿಗಳು ಗೊಲ್ಲರಹಟ್ಟಿಗಳನ್ನು ಪರಿಶೀಲಿಸಿದ್ದಾರೆ, ಅವರ ಜೊತೆ ಚರ್ಚೆ ನಡೆಸಿದ್ದಾರೆ. ಯಾವುದೇ ಸಮಾಜವನ್ನು ನೋವಾಗದಂತೆ ನೋಡಿಕೊಳ್ಳುವುದು ನನ್ನ ಉದ್ದೇಶ. ಮಾದಿಗ ಸಮಾಜವನ್ನ ಮಾತ್ರ ತಿರಸ್ಕಾರ ಮಾಡುತ್ತಾರೆ ಎಂಬುದಲ್ಲ, ಇನ್ನೂ ಅನೇಕ ಸಮಾಜದವರನ್ನು ತಿರಸ್ಕರಿಸುತ್ತಾರೆ. ಅದಕ್ಕಿಂತ ಮಿಗಿಲಾಗಿ ತಾಯಂದಿರೆ ಅವರ ಮನೆಯ ಹೆಣ್ಣುಮಕ್ಕಳು ಬಾಣಂತಿಯರಾದ ಸಂದರ್ಭದಲ್ಲಿ ಊರಿನಿಂದ ಹೊರಗಿಡುವ ಮೂಲಕ ಅಸ್ಪೃಶ್ಯತೆಯ ರೀತಿಯಲ್ಲಿ ನೋಡುವ ಮನೋಭಾವ ಗೊಲ್ಲರ ಹಟ್ಟಿಗಳಲ್ಲಿ ಮೊದಲು ಬದಲಾಗಬೇಕು. ಸಮಾಜವನ್ನು ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ಮುಂದಾಗಬೇಕು. ಚುನಾವಣೆಗಾಗಿ, ಮತಗಳಿಗಾಗಿ ರಾಜಕಾರಣ ಮಾಡುವ ನಾರಾಯಣಸ್ವಾಮಿ ನಾನಲ್ಲ. ನಾಳೆ ಸೋಲುತ್ತೇನೋ, ಗೆಲ್ಲುತ್ತೇನೋ ಎಂದು ಭಯ ಪಡುವವನು ನಾನಲ್ಲ, ಶತ್ರು ಮನೆಗೆ ಹೋಗಿ ಹೃದಯ ಗೆಲ್ಲುವ ನಾರಾಯಣಸ್ವಾಮಿ ನಾನು ಎಂದರು.

ABOUT THE AUTHOR

...view details