ಕರ್ನಾಟಕ

karnataka

ETV Bharat / city

ಶಿರಾದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ - ಶಿರಾದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ

ಶಿರಾ ನಗರದಲ್ಲಿ 100 ಹಾಸಿಗೆಗಳ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಚಿವ ಸುಧಾಕರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 2016ರಲ್ಲಿ ನಬಾರ್ಡ್ ಯೋಜನೆ ಅಡಿಯಲ್ಲಿ ಮೊದಲು 60 ಹಾಸಿಗೆಗಳ ಆಸ್ಪತ್ರೆಗೆ ಅನುಮತಿ ನೀಡಲಾಗಿತ್ತು. ನಂತರ 2020ರಲ್ಲಿ ಪುನಃ 40 ಹಾಸಿಗೆಗಳನ್ನು ನೀಡಿ, 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮಾಡಲು ಮಂಜೂರಾತಿ ಆದೇಶ ದೊರೆತಿತ್ತು. ಇದೀಗ ಕಟ್ಟಡ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ ಎಂದರು.

Inauguration of 100 beds mother and children's hospital in Shira
ಶಿರಾದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ

By

Published : Feb 24, 2021, 9:45 AM IST

ತುಮಕೂರು:ಜಿಲ್ಲೆಯ ಶಿರಾ ನಗರದಲ್ಲಿ 100 ಹಾಸಿಗೆಗಳ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಉದ್ಘಾಟಿಸಿದರು.

ಶಿರಾದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ

ಬಳಿಕ ಮಾತನಾಡಿದ ಅವರು, 2016ರಲ್ಲಿ ನಬಾರ್ಡ್ ಯೋಜನೆ ಅಡಿಯಲ್ಲಿ ಮೊದಲು 60 ಹಾಸಿಗೆಗಳ ಆಸ್ಪತ್ರೆಗೆ ಅನುಮತಿ ನೀಡಲಾಗಿತ್ತು. ನಂತರ 2020ರಲ್ಲಿ ಪುನಃ 40 ಹಾಸಿಗೆಗಳನ್ನು ನೀಡಿ, 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮಾಡಲು ಮಂಜೂರಾತಿ ಆದೇಶ ದೊರೆತಿತ್ತು. ಇದೀಗ ಕಟ್ಟಡ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ. ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ ನಂತರ, ಇದೀಗ ಶಿರಾ ನಗರದಲ್ಲಿ ಅತಿದೊಡ್ಡ ಸರ್ಕಾರಿ ಉದ್ಘಾಟನೆಯಾಗಿದೆ. ಸುತ್ತಮುತ್ತಲ ಗ್ರಾಮಸ್ಥರಿಗೆ ಇದು ಸಹಕಾರಿಯಾಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಈ ಆಸ್ಪತ್ರೆ ಮೂಲಕ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಜನರು ದೂರದ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹೋಗುವುದು ತಪ್ಪಿದಂತಾಗಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಮಾರ್ಚ್ ತಿಂಗಳಿನಲ್ಲಿ ಸಾರ್ವಜನಿಕವಾಗಿ ಕೊರೊನಾ ವ್ಯಾಕ್ಸಿನ್ ನೀಡಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ.

ಓದಿ:ರಾಹುಲ್​ ಗಾಂಧಿ ಹೇಳಿಕೆ ಉತ್ತರ-ದಕ್ಷಿಣ ಭಾರತ ವಿಭಜನೆಯ ವಿವಾದ ಸೃಷ್ಟಿಸಿದೆ: ಬಿಜೆಪಿ ಕಿಡಿ

ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಜನಪ್ರತಿನಿಧಿಗಳಿಗೆ ವ್ಯಾಕ್ಸಿನ್ ನೀಡಿಕೆ ಆದೇಶ ಹೊರಬಿದ್ದ ತಕ್ಷಣ ರಾಜ್ಯದಲ್ಲಿ ನಾನೇ ಮೊದಲು ವ್ಯಾಕ್ಸಿನ್ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ABOUT THE AUTHOR

...view details