ತುಮಕೂರು : ಜಿಲ್ಲೆಯ ತಿಪಟೂರು ತಾಲೂಕಿನ ಈಚನೂರು ಕೆರೆಕೋಡಿಯಿಂದ ಕರಡಾಳು ಸಂತೆ ಮೈದಾನಕ್ಕೆ ಹೋಗುವ ಮಾರ್ಗದ ರಸ್ತೆ ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ದುರಸ್ತಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೆಸರು ಗದ್ದೆಯಂತಾಗಿರುವ ರಸ್ತೆ ದುರಸ್ತಿ ಪಡಿಸಲು ಆಗ್ರಹ - ಈಚನೂರು ರಸ್ತೆ ಸಮಸ್ಯೆ
ಹೇಮಾವತಿ ನಾಲೆಯ ಪಕ್ಕದಲ್ಲಿಯೇ ಇರುವ, ಈಚನೂರು ಕೆರೆಕೋಡಿಯಿಂದ ಕರಡಾಳು ಸಂತೆ ಮೈದಾನಕ್ಕೆ ಹೋಗುವ ಮಾರ್ಗದ ರಸ್ತೆ ಹದಗೆಟ್ಟಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
![ಕೆಸರು ಗದ್ದೆಯಂತಾಗಿರುವ ರಸ್ತೆ ದುರಸ್ತಿ ಪಡಿಸಲು ಆಗ್ರಹ ichanuru-villagers-demanding-to-repair-road](https://etvbharatimages.akamaized.net/etvbharat/prod-images/768-512-7988471-thumbnail-3x2-dd.jpg)
ರಸ್ತೆ ದುರಸ್ತಿ
ಹೇಮಾವತಿ ನಾಲೆಯ ಪಕ್ಕದಲ್ಲೇ ಇರುವ ರಸ್ತೆಯನ್ನು ಗ್ರಾಮಸ್ಥರು ಅವಲಂಬಿಸಬೇಕಿದ್ದು, ಈಗಾಗಲೇ ಮಳೆಯಿಂದಾಗಿ ರಸ್ತೆ ಡಾಂಬರು ಇಲ್ಲದೆ ಕೆಸರುಗದ್ದೆಯಂತಾಗಿದೆ. ಅಲ್ಲದೇ ನಾಲೆಗೆ ಸುತ್ತಲೂ ತಡೆಗೋಡೆ ಇಲ್ಲದಿರುವುದರಿಂದ ಗ್ರಾಮಸ್ಥರು ಪ್ರಾಣ ಭಯದಿಂದ ಓಡಾಡಬೇಕಾಗಿದೆ.
ಕೆಸರು ಗದಗೆಯಂತಾಗಿರುವ ರಸ್ತೆ ದುರಸ್ತಿ ಪಡಿಸಲು ಆಗ್ರಹ
ಈ ರಸ್ತೆಯಲ್ಲಿ ಕೋಡಿಹಳ್ಳಿ ಕಾವಲಿನ ಕೆಎಮ್ಎಫ್ ಡೈರಿ ಇದ್ದು ಹಾಲಿನ ವಾಹನ ಹಾಗೂ ಕೋಡಿಹಳ್ಳಿ ಕಾವಲಿನ ನೂರಾರು ಜನರು ಓಡಾಡಲು ತೀವ್ರ ತೊಂದರೆಯಾಗಿದೆ. ರಸ್ತೆ ದುರಸ್ತಿ ಪಡಿಸುವಂತೆ ಹಲವು ಬಾರಿ ಹೇಮಾವತಿ ಇಂಜಿನಿಯರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.