ಕರ್ನಾಟಕ

karnataka

ETV Bharat / city

ಗಂಡ-ಹೆಂಡತಿ ಜಗಳ ಬಿಡಿಸಲು ಹೋದ ನಾದಿನಿಯ ಕೈ ಪೀಸ್ ಪೀಸ್...! - ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿಯಲ್ಲಿ

ಕ್ಷುಲ್ಲಕ ಕಾರಣಕ್ಕೆ ಪತಿ ಪತ್ನಿ ಜಗಳವಾಡುತ್ತಿದ್ದುದನ್ನು ಬಿಡಿಸಲು ಮಧ್ಯ ಪ್ರವೇಶಿಸಿದ ನಾದಿನಿಯ ಕೈ ತುಂಡಾಗಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿಯಲ್ಲಿ ನಡೆದಿದೆ.

Kn_tmk_01_assualt_script_7202233
ಪತಿ-ಪತ್ನಿ ಜಗಳ, ಬಿಡಿಸಲು ಹೋದ ನಾದಿನಿಯ ಕೈ ಪೀಸ್ ಪೀಸ್...!

By

Published : Mar 16, 2020, 1:26 PM IST

ತುಮಕೂರು:ಕ್ಷುಲ್ಲಕ ಕಾರಣಕ್ಕೆ ಪತಿ ಪತ್ನಿ ಜಗಳವಾಡುತ್ತಿದ್ದುದನ್ನು ಬಿಡಿಸಲು ಮಧ್ಯ ಪ್ರವೇಶಿಸಿದ ನಾದಿನಿಯ ಕೈ ತುಂಡಾಗಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿಯಲ್ಲಿ ನಡೆದಿದೆ.

ಪತಿ ಹನುಮಂತ ತನ್ನ ಪತ್ನಿ ಅನಿತಾ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲು ಹೋಗಿದ್ದನು. ಹಲ್ಲೆ ನಡೆಸುವಾಗ ಅನಿತಾಳ ತಂಗಿ ಮೇಘನಾ ತಡೆಯಲು ಯತ್ನಿಸಿದ್ದಾರೆ. ಕೋಪೋದ್ರಿಕ್ತನಾಗಿದ್ದ ಹನುಮಂತ ಮಚ್ಚು ಬೀಸಿದಾಗ ಅಡ್ಡ ಬಂದ ನಾದಿನಿ ಮೇಘನಾ ಅವರ ಕೈ ತುಂಡಾಗಿದೆ. ಬೆಂಗಳೂರಿನಲ್ಲಿ ವಾಸವಾಗಿದ್ದ ಹನುಮಂತನ ಕುಟುಂಬದಲ್ಲಿ ಆಗಾಗ್ಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಗಳು ನಡೆಯುತ್ತಿದ್ದವು. ಸದ್ಯ ಹಲ್ಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿ ಹನುಮಂತನನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ.

ಗಾಯಾಳು ಮೇಘನಾ ತುರ್ತು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿದ್ದು, ಮಧುಗಿರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details