ಕರ್ನಾಟಕ

karnataka

ETV Bharat / city

ಗಲಾಟೆ ಮಾಡಿಕೊಂಡು ದೂರವಾಗಿದ್ದ ದಂಪತಿ: ಮಾತನಾಡ್ಬೇಕು ಬಾ ಅಂತೇಳಿ ಪತ್ನಿ ಕಾಲನ್ನೇ ಕತ್ತರಿಸಿದ ಪತಿ! - ಲಾಡ್ಜ್​ಗೆ ಕರೆತಂದು ಪತ್ನಿಯ ಕಾಲು ಕಡಿದ ವ್ಯಕ್ತಿ

ತುಮಕೂರು ನಗರದಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಲಾಡ್ಜ್​ಗೆ ಕರೆದುಕೊಂಡು ಹೋಗಿ ಆಕೆಯ ಕಾಲು ಕತ್ತರಿಸಿ ಕೊಲೆಗೆ ಯತ್ನಿಸಿದ್ದಾನೆ. ಬಳಿಕ ತಾನೂ ಚೂರಿ ಇರಿದುಕೊಂಡು ಹೈಡ್ರಾಮಾ ಸೃಷ್ಟಿಸಿದ್ದಾನೆ.

husband murder attempt on wife in Tumakuru
ಲಾಡ್ಜ್​ಗೆ ಕರೆದೊಯ್ದು ಪತ್ನಿಯ ಕಾಲು ಕತ್ತರಿಸಿದ ಪತಿ.. ತಾನೂ ಹೊಟ್ಟೆಗೆ ಇರಿದುಕೊಂಡು ಶರಣಾದ!

By

Published : Mar 16, 2022, 3:45 PM IST

Updated : Mar 17, 2022, 5:27 PM IST

ತುಮಕೂರು: ಕಳೆದ ಮೂರು ವರ್ಷಗಳ ಹಿಂದೆ ಗಂಡ ಹೆಂಡಿರ ನಡುವೆ ಶುರುವಾದ ಕೌಟುಂಬಿಕ ಕಲಹ ಇಬ್ಬರನ್ನ ಬೇರೆ ಬೇರೆ ಮಾಡಿತ್ತು. ಇಂದು ಪತ್ನಿಗೆ ಕರೆ ಮಾಡಿದ ಪತಿರಾಯ, ನಿನ್ನ ಬಳಿ ಮಾತನಾಡ್ಬೇಕು ಅಂತ ಲಾಡ್ಜ್​ಗೆ ಕರೆಸಿಕೊಂಡಿದ್ದ. ಮಾತನಾಡುವ ಬದಲು ಪತ್ನಿಯ ಕಾಲನ್ನೆ ಕತ್ತರಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ತುಮಕೂರಿನ ಅಶೋಕ ಲಾಡ್ಜ್​ನಲ್ಲಿ ಈ ಘಟನೆ ಜರುಗಿದೆ. ಬಾಬು ಎಂಬಾತ ತನ್ನ ಪತ್ನಿಯ ಕಾಲನ್ನೇ ಕಟ್​ ಮಾಡಿದವ. ಈತ ಮೂಲತಃ ಗದಗ ಜಿಲ್ಲೆಯವನು ಇಂದು ಬೆಳಗ್ಗೆ ಲಾಡ್ಜ್ ರೂಂ ಬುಕ್ ಮಾಡಿದ್ದ ಅಸಾಮಿ ತನ್ನ ಪತ್ನಿಯ ಕಾಲನ್ನ ಮಚ್ಚಿನಿಂದ ಕೊಚ್ಚಿ ಪೊಲೀಸರಿಗೆ ರೇಡ್ ಹ್ಯಾಂಡ್ ಆಗಿ ಸಿಕ್ಕಿಬಿದಿದ್ದಾನೆ.

ಘಟನೆ ವಿವರ:

ಕಳೆದ ನಾಲ್ಕೈದು ವರ್ಷಗಳ ಹಿಂದೆ ತುಮಕೂರು ಜಿಲ್ಲೆ ಮಧುಗಿರಿ ಮೂಲದ ಅನಿತಾ ಗದಗ ಮೂಲದ ಬಾಬು ಎಂಬಾತನನ್ನ ಮದುವೆಯಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ಸಂಸಾರದಲ್ಲಿ ಬಿರುಕು ಬಿಟ್ಟು ಅವರಿಬ್ಬರು ಬೇರೆ ಬೇರೆಯಾಗಿದ್ರು. ಕಳೆದ ಒಂದು ವರ್ಷದ ಹಿಂದೆ ಕುಡಿದು ಬಂದು ಬಾಬು ತನ್ನ ಪತ್ನಿ ಅನಿತಾಳನ್ನ ಅವಾಚ್ಯ ಪದ ಬಳಕೆ ಮಾಡಿ ನಿಂದನೆ ಮಾಡ್ತಿದ್ನಂತೆ. ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಗೆ ಪತಿ ವಿರುದ್ಧ ಪತ್ನಿ ದೂರು ದಾಖಲಿಸಿದ್ದಳು.

ಇದಾದ ನಂತರ ಇಬ್ಬರೂ ಪರಸ್ಪರ ವಿಚ್ಛೇಧನ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದರು. ಈ ನಡುವೆ ಮಧುಗಿರಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಅನಿತಾ ಕೆಲಸ ಮಾಡಿಕೊಂಡಿದ್ದರೆ ಕಾರು ಚಾಲಕನಾಗಿ ಬಾಬು ಕೆಲಸ ಮಾಡಿಕೊಂಡಿದ್ದ. ಈ ನಡುವೆ ಇಂದು ತುಮಕೂರಿನ ಅಶೋಕ ಲಾಡ್ಜ್ ಗೆ ಬಂದು ರೂಂ. ಬುಕ್ ಮಾಡಿ ಅನಿತಾಳಿಗೆ ಕರೆ ಮಾಡಿ, ನಿನ್ನ ಬಳಿ ಏನೋ ಮಾತನಾಡಬೇಕು ಬಾ ಅಂತ ಒತ್ತಾಯ ಮಾಡಿದ್ದಾನೆ. ಅದರಂತೆ ಲಾಡ್ಜ್ ಗೆ ಬಂದ ಅನಿತಾಳ ಜೊತೆ ತಿಂಡಿ ತಿಂದು ಇಬ್ಬರೂ ಲಾಡ್ಜ್ ನ ರೂಂಗೆ ಹೋಗಿದ್ದಾರೆ.

ಮಾತನಾಡ್ಬೇಕು ಬಾ ಅಂತೇಳಿ ಪತ್ನಿ ಕಾಲನ್ನೇ ಕತ್ತರಿಸಿದ ಪತಿ!

ಇದಾದ ಬಳಿಕ ಇಬ್ಬರ ನಡುವೆ ಜಗಳ ಶುರುವಾಗಿದೆ. ಮೊದಲೇ ಹೆಂಡತಿಗೆ ಒಂದು ಗತಿ ಕಾಣಿಸ್ಬೇಕು ಅಂತ ನಿರ್ಧರಿಸಿ ಮಚ್ಚು ಹಾಗೂ ಚಾಕು ಸಮೇತ ಬಂದಿದ್ದ ಬಾಬು, ಭೀಕರವಾಗಿ ತನ್ನ ಪತ್ನಿಯ ಕಾಲು ಕತ್ತರಿಸಿದ್ದಾನೆ. ಆ ವೇಳೆ ತಾನು ಸಹ ಚಾಕುವಿನಿಂದ ಚುಚ್ಚಿಕೊಳ್ಳುವ ಹೈಡ್ರಾಮ ಸೃಷ್ಟಿಸಿದ್ದಾನೆ. ಇದಾದ ನಂತರ ಆತನೇ 108 ಗೆ ಕರೆ ಮಾಡಿ ಅಂಬ್ಯುಲೆನ್ಸ್ ಕಳುಹಿಸುವಂತೆ ಹೇಳಿದ್ದಾನೆ. ಬಳಿಕ ಲಾಡ್ಜ್ ಮಾಲೀಕರ ಬಳಿ ಹೋಗಿ ಮಚ್ಚಿನಿಂದ ತನ್ನ ಪತ್ನಿಯ ಕಾಲು ಕತ್ತರಿಸಿದ್ದೇನೆ, ಅಂಬ್ಯುಲೆನ್ಸ್ ಬರ್ತಿದೆ ನಾಲ್ವರು ಲಾಡ್ಜ್ ಸಿಬ್ಬಂದಿಯನ್ನು ರೂಂಗೆ ಕಳುಹಿಸಿ ಅಂತಾ ಹೇಳಿದ್ದಾನೆ.

ಇದರಿಂದ ಗಾಬರಿಗೊಂಡ ಲಾಡ್ಜ್ ಮಾಲೀಕ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ತುಮಕೂರು ಟೌನ್ ಪೊಲೀಸರು ಆರೋಪಿ ಬಾಬು ನನ್ನ ವಶಕ್ಕೆ ಪಡೆದು, ರಕ್ತದ ಮಡುವಿನಲ್ಲಿ ಬಿದಿದ್ದ ಅನಿತಾಳನ್ನ ತುಮಕೂರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.

ಅದೃಷ್ಟವಶಾತ್ ಪ್ರಾಣಪಾಯದಿಂದ ಅನಿತಾ ಪಾರಾಗಿದ್ದಾರೆ. ಆತನ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಈ ರೀತಿ ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಪತಿ ವಿರುದ್ಧ ಪತಿ ಆರೋಪ ಮಾಡಿದ್ದಾಳೆ. ಘಟನೆ ಸಂಬಂಧ ತುಮಕೂರು ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ:ಯಾದಗಿರಿಯಲ್ಲಿ ಎರಡು ಕಡೆ ಎಸಿಬಿ ದಾಳಿ : 5 ಲಕ್ಷ ನಗದು, ಚಿನ್ನ ಹಾಗೂ ಬೆಳ್ಳಿ ವಶಕ್ಕೆ

Last Updated : Mar 17, 2022, 5:27 PM IST

ABOUT THE AUTHOR

...view details