ಕರ್ನಾಟಕ

karnataka

ETV Bharat / city

ಮಧುಗಿರಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಗಾತ್ರದ ಬಂಡೆ: ತಪ್ಪಿದ ಭಾರಿ ಅನಾಹುತ - ರಸ್ತೆಗೆ ಉರುಳಿದ ಬೃಹತ್ ಗಾತ್ರದ ಬಂಡೆ

ನಿರಂತರ ಮಳೆಯಿಂದಾಗಿ ಬೃಹತ್ ಗಾತ್ರದ ಬಂಡೆಯೊಂದು ರಸ್ತೆಗೆ ಉರುಳಿ ಬಿದ್ದ (Huge rock topples down the road) ಘಟನೆ ತುಮಕೂರು ಜಿಲ್ಲೆಯ ಮಧುಗಿರಿ (madhugiri) ಪಟ್ಟಣದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Huge rock topples down the road
ಮಧುಗಿರಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಗಾತ್ರದ ಬಂಡೆ

By

Published : Nov 17, 2021, 2:21 PM IST

ತುಮಕೂರು: ನಿರಂತರ ಮಳೆಯಿಂದಾಗಿ ಜಿಲ್ಲೆಯ ಮಧುಗಿರಿ (madhugiri) ಪಟ್ಟಣದಲ್ಲಿ ಬೃಹತ್ ಗಾತ್ರದ ಬಂಡೆಯೊಂದು ರಸ್ತೆಗೆ ಉರುಳಿ ಬಿದ್ದ(Huge rock topples down the road) ಘಟನೆ ನಡೆದಿದೆ. ಕೆಎಸ್​​ಆರ್​​ಟಿಸಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಬೆಟ್ಟದಲ್ಲಿ ಈ ಘಟನೆ ನಡೆದಿದೆ.

ಮಧುಗಿರಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಗಾತ್ರದ ಬಂಡೆ

ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಮಣ್ಣು ಸಡಿಲಗೊಂಡು ಬಂಡೆ ರಸ್ತೆ ಬದಿಗೆ ಜಾರಿದೆ. ನೂರಾರು ಜನರು ಮತ್ತು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಮಧುಗಿರಿ ಎಸಿ ಸೋಮಪ್ಪ ಕಡಕೋಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದ್ದು, ಆನಂದರಾಯ ಗುಡ್ಡದ ಬಂಡೆ ಕುಸಿದಿದೆ. ಈಗಾಗಲೇ ಸ್ಥಳ ಪರಿಶೀಲಿಸಲಾಗಿದ್ದು, ಬಂಡೆ ಸಮೀಪದಲ್ಲಿರುವ ಮನೆಗಳನ್ನು ತಾತ್ಕಾಲಿಕವಾಗಿ ಖಾಲಿ ಮಾಡಲು ಸೂಚನೆ ನೀಡಲಾಗಿದೆ ಎಂದು ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ತಿಳಿಸಿದ್ದಾರೆ.

ಇದನ್ನೂ ಓದಿ:ರಾಮನಗರದಲ್ಲಿ ಧಾರಾಕಾರ ಮಳೆ: ಕಣ್ವ ಜಲಾಶಯದಲ್ಲಿ ತೇಲಿಬಂದವು ಮೃತದೇಹಗಳು

ABOUT THE AUTHOR

...view details