ಕರ್ನಾಟಕ

karnataka

ETV Bharat / city

ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಆದಿಚುಂಚನಗಿರಿ ಶ್ರೀಗಳೊಂದಿಗೆ ನಾಗೇಶ್​ ಚರ್ಚಿಸಿದ್ದಾರೆ - ಗೃಹ ಸಚಿವ - ತುಮಕೂರಿನಲ್ಲಿ ಪಠ್ಯಪುಸ್ತಕ ವಿವಾದದ ಬಗ್ಗೆ ಗೃಹ ಸಚಿವರ ಪ್ರತಿಕ್ರಿಯೆ

ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಬಗ್ಗೆ ಸಚಿವ ನಾಗೇಶ್ ಅವರು ಆದಿಚುಂಚನಗಿರಿ ಶ್ರೀಗಳೊಂದಿಗೆ ಚರ್ಚಿಸಿದ್ದಾರೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Home minister reaction over syllabus issue, Home minister reaction over syllabus issue in Tumkur, Home minister Araga Jnanendra news, ಪಠ್ಯಪುಸ್ತಕ ವಿವಾದದ ಬಗ್ಗೆ ಗೃಹ ಸಚಿವರ ಪ್ರತಿಕ್ರಿಯೆ, ತುಮಕೂರಿನಲ್ಲಿ ಪಠ್ಯಪುಸ್ತಕ ವಿವಾದದ ಬಗ್ಗೆ ಗೃಹ ಸಚಿವರ ಪ್ರತಿಕ್ರಿಯೆ, ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿ,
ಸಚಿವ ನಾಗೇಶ್ ಆದಿಚುಂಚನಗಿರಿ ಶ್ರೀಗಳೊಂದಿಗೆ ಚರ್ಚಿಸಿದ್ದಾರೆ ಎಂದ ಗೃಹ ಸಚಿವ

By

Published : Jun 1, 2022, 1:31 PM IST

Updated : Jun 1, 2022, 2:25 PM IST

ತುಮಕೂರು:ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ ಚಕ್ರತೀರ್ಥ ವಿರುದ್ಧ ಎದ್ದಿರುವ ವಿವಾದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಆದಿಚುಂಚನಗಿರಿ ಸ್ವಾಮೀಜಿಗಳನ್ನು ಶಿಕ್ಷಣ ಸಚಿವ ನಾಗೇಶ್ ಭೇಟಿ ಮಾಡಿದ್ದಾರೆ. ಆದರೆ, ವಿನಾಕಾರಣ ಚರ್ಚೆ ಎಬ್ಬಿಸಲಾಗುತ್ತಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದರು.

ಸಚಿವ ನಾಗೇಶ್ ಆದಿಚುಂಚನಗಿರಿ ಶ್ರೀಗಳೊಂದಿಗೆ ಚರ್ಚಿಸಿದ್ದಾರೆ ಎಂದ ಗೃಹ ಸಚಿವ

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಠ್ಯಪುಸ್ತಕದ ಬಗ್ಗೆ ಸಚಿವ ನಾಗೇಶ್ ಅವರು ಮಾತನಾಡಿದ್ದಾರೆ. ಕನ್ನಡ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರ ಗಡಿಪಾರಿಗೆ ವಿವಿಧೆಡೆಯಿಂದ ಆಗ್ರಹ ಮಾಡುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಗಡಿಪಾರು ಮಾಡಬೇಕಾದರೇ ಸಾಕಷ್ಟು ನಿಯಮಾವಳಿಗಳಿರುತ್ತೆ, ಈ ರೀತಿ ಹೇಳುವವರಿಗೆ ಅದು ಗೊತ್ತಿಲ್ಲ. ಗಡಿಪಾರು ಮಾಡುವಂತಹ ಯಾವ ಅಪರಾಧ ನಡೆದಿದೆ ಅನ್ನೋದು ನನ್ನ ಗಮನದಲ್ಲಿಲ್ಲ ಎಂದರು.

ಓದಿ:ಪಠ್ಯಪುಸ್ತಕ ಪರಿಷ್ಕರಣೆ ವಿವಾದ : ಶಿಕ್ಷಣ ಸಚಿವರ ವರದಿ ಆಧಾರದ ಮೇಲೆ ಕ್ರಮ.. ಸಿಎಂ ಬೊಮ್ಮಾಯಿ


Last Updated : Jun 1, 2022, 2:25 PM IST

ABOUT THE AUTHOR

...view details