ಕರ್ನಾಟಕ

karnataka

ETV Bharat / city

ತುಮಕೂರಿನಲ್ಲಿ ಭಾರೀ ಮಳೆ... ಕೆರೆಯಂತಾದ ರಸ್ತೆ - ಕೆರೆಯಂತಾದ ರಸ್ತೆ

ತುಮಕೂರು ನಗರದಲ್ಲಿ ಸುರಿದ ಭಾರೀ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ಜನ ಸಂಚರಿಸಲು ಪರದಾಡಿದರು.

ಮಳೆ
ಮಳೆ

By

Published : Aug 28, 2021, 3:40 AM IST

ತುಮಕೂರು: ಶುಕ್ರವಾರ ಸಂಜೆ ತುಮಕೂರು ನಗರದಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ಸಂಗ್ರವಾಗಿ ಜನ ಸಂಚರಿಸಲು ಪರದಾಡಿದರು.

ತುಮಕೂರು ನಗರದ ಅಂತರಸನಹಳ್ಳಿ‌ ಮಾರ್ಕೆಟ್ ಬ್ರಿಡ್ಜ್ ಕೆಳಗೆ ಸಂಗ್ರಹವಾಗಿದ್ದ ಮಳೆ‌ ನೀರಿನಿಂದಾಗಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ವಾಹನಗಳ ಅರ್ಧಭಾಗ ಮುಳುಗಿದ್ದರೂ ರಸ್ತೆ ದಾಟಲು ಸವಾರರು ವಿಧಿಯಿಲ್ಲ ಸಾಗುತ್ತಿದ್ದರು.


ಇನ್ನು ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಸುರಿದ ಭಾರೀ ಮಳೆಯಿಂದ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತು.

ABOUT THE AUTHOR

...view details