ಕರ್ನಾಟಕ

karnataka

ETV Bharat / city

ತುಮಕೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮುಖ್ಯ ಶಿಕ್ಷಕನ ಬಂಧನ - ತುಮಕೂರು ಶಾಲೆಯ ಮುಖ್ಯ ಶಿಕ್ಷಕ ಅರೆಸ್ಟ್

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಶಿರಾ ನಗರದ ಬೇಗಂ ಮೊಹಲ್ಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಉರ್ದು ಶಾಲೆ) ಮುಖ್ಯ ಶಿಕ್ಷಕ ಮಹಮ್ಮದ್​ ಇಕ್ಬಾಲ್ ಆವಟಿಯನ್ನು ಬಂಧಿಸಲಾಗಿದೆ.

Headmaster arrested under Sexual harassment case
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ ಅರೆಸ್ಟ್

By

Published : Dec 31, 2021, 2:22 PM IST

ತುಮಕೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೊಲೀಸರು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕನನ್ನು ಬಂಧಿಸಿರುವ ಘಟನೆ ಶಿರಾ ನಗರದಲ್ಲಿ ನಡೆದಿದೆ.

ಶಿರಾ ನಗರದ ಬೇಗಂ ಮೊಹಲ್ಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಉರ್ದು ಶಾಲೆ) ಮುಖ್ಯ ಶಿಕ್ಷಕ ಮಹಮ್ಮದ್​ ಇಕ್ಬಾಲ್ ಆವಟಿಯನ್ನು ಬಂಧಿಸಲಾಗಿದೆ. ವಿಶೇಷ ತರಗತಿ ನೆಪದಲ್ಲಿ 6ನೇ ತರಗತಿ ವಿದ್ಯಾರ್ಥಿನಿಯೋರ್ವಳನ್ನು ಕಚೇರಿಗೆ ಕರೆಸಿಕೊಂಡು ಮುಖ್ಯಶಿಕ್ಷಕ 50 ರೂ. ಕೊಡುವುದಾಗಿ ಹೇಳಿ ಲೈಂಗಿಕ ಕಿರುಕುಳ ನೀಡಿದ್ದನು. ಎರಡು ತಿಂಗಳ ಹಿಂದೆ ಶಾಲೆ ಬಿಟ್ಟ ಬಳಿಕವೂ ಶಾಲೆಯಲ್ಲಿ ವಿಶೇಷ ತರಗತಿ ನಡೆಸುವುದಾಗಿ ಮುಖ್ಯ ಶಿಕ್ಷಕ ಹೇಳಿದ್ದನು. ತೀವ್ರವಾಗಿ ನೊಂದಿದ್ದ ವಿದ್ಯಾರ್ಥಿನಿ ಈ ವಿಚಾರವನ್ನು ಪೋಷಕರ ಬಳಿ ಹೇಳಿದ್ದಾಳೆ.

ಈ ಹಿನ್ನೆಲೆಯಲ್ಲಿ ಪೋಷಕರು ಶಿರಾ ಪೊಲೀಸ್ ಠಾಣೆಗೆ ಡಿ.21ರಂದು ದೂರು ನೀಡಿದ್ದರು. ತಕ್ಷಣ ಎಚ್ಚೆತ್ತುಕೊಂಡು ಪೊಲೀಸರು ಆರೋಪಿ ಮುಖ್ಯಶಿಕ್ಷಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ:ಕಲಬುರಗಿ ಜಿಲ್ಲೆಯಲ್ಲೂ ಪರ್ಸಂಟೇಜ್​​ ಕಾಟ, ಗುತ್ತಿಗೆದಾರರ ಆಕ್ರೋಶ

ಬಂಧನಕ್ಕೊಳಗಾಗಿರುವ ಮುಖ್ಯ ಶಿಕ್ಷಕ ಮಹಮ್ಮದ್​ ​ಇಕ್ಬಾಲ್ ನನ್ನು ಡಿಡಿಪಿಐ ಕೃಷ್ಣ ಮೂರ್ತಿ ಸೇವೆಯಿಂದ ಅಮಾನತು ಮಾಡಿದ್ದಾರೆ.

ABOUT THE AUTHOR

...view details