ಕರ್ನಾಟಕ

karnataka

ETV Bharat / city

ಮನೆ ಮನೆಗೆ ತೆರಳಿ ದೇವೇಗೌಡರಿಂದ ಪ್ರಚಾರ.. ಶಾಸಕ ಗೌರಿಶಂಕರ್​ ನಿವಾಸದಲ್ಲಿ ಮಾಜಿ ಪಿಎಂ ಮೀಟಿಂಗ್​! - undefined

ರಾಜಕೀಯ ನಾಯಕರು ತಮ್ಮ ತಮ್ಮಲ್ಲಿಯೇ ಗೆಲುವು-ಸೋಲಿನ ಲೆಕ್ಕಾಚಾರ ಹಾಕಿಕೊಳ್ಳುತ್ತಿದ್ದಾರೆ. ತುಮಕೂರು ಕ್ಷೇತ್ರದಿಂದ ಕಣಕ್ಕಿಳಿದಿರುವ ಹೆಚ್.ಡಿ.ದೇವೇಗೌಡರು ಇಂದು ಜೆಡಿಎಸ್​ ಮುಖಂಡರ ಮನೆಗೆ ತೆರಳಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಗೌರಿಶಂಕರ್​ ನಿವಾಸದಲ್ಲಿ ದೇವೇಗೌಡರು

By

Published : Apr 17, 2019, 12:47 PM IST

ತುಮಕೂರು:ಕರ್ನಾಟಕದಲ್ಲಿಲೋಕಸಭೆಗೆ ನಾಳೆ ಮೊದಲ ಹಂತದ ಚುನಾವಣೆ ನಡೆಯಲಿದೆ. ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮಾಡಿದ ಮಾಜಿ ಪ್ರಧಾನಿ ದೇವೇಗೌಡರು ಇದೀಗ ಮನೆ ಮನೆ ಪ್ರಚಾರ ನಡೆಸುತ್ತಿದ್ದಾರೆ.

ಗೌರಿಶಂಕರ್​ ನಿವಾಸದಲ್ಲಿ ಮಾಜಿ ಪ್ರಧಾನಿ ದೇವೇಗೌಡರು

ನಿನ್ನೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ರಾಜಕೀಯ ನಾಯಕರು ತಮ್ಮ ತಮ್ಮಲ್ಲಿಯೇ ಗೆಲುವು-ಸೋಲಿನ ಲೆಕ್ಕಾಚಾರ ಹಾಕಿಕೊಳ್ಳುತ್ತಿದ್ದಾರೆ. ತುಮಕೂರು ಕ್ಷೇತ್ರದಿಂದ ಕಣಕ್ಕಿಳಿದಿರುವ ಹೆಚ್.ಡಿ.ದೇವೇಗೌಡರು ಇಂದು ಜೆಡಿಎಸ್​ ಮುಖಂಡರ ಮನೆಗೆ ತೆರಳಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ತುಮಕೂರಿನ ಜಯನಗರದಲ್ಲಿರುವ ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಶಾಸಕ ಡಿ.ಸಿ.ಗೌರಿಶಂಕರ್ ನಿವಾಸಕ್ಕೆ ಭೇಟಿ ನೀಡಿದ ದೇವೇಗೌಡರು, ಕೆಲಕಾಲ ರಾಜಕೀಯ ವಿಚಾರವಾಗಿ ಚರ್ಚೆ ನಡೆಸಿದರು. ಆನಂತರ ಮನೆ ಮನೆ ಪ್ರಚಾರಕ್ಕೆ ತೆರಳಿ ಮತದಾರರ ಮನಗೆಲ್ಲಲು ಕೊನೆ ಹಂತದ ಕಸರತ್ತು ನಡೆಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details