ತುಮಕೂರು: ಕೆಐಎಡಿಬಿ ಅಧಿಕಾರಿ ಅನಿಲ್ ಕುಮಾರ್ (KIADB Officer Anil Kumar) ರಾಜೀನಾಮೆಗೂ, ಜೆಡಿಎಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H D Kumarswamy) ತಿಳಿಸಿದ್ದಾರೆ.
ಕೊರಟಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನ ಅಧಿಕಾರಿ ಅನಿಲ್ ಕುಮಾರ್ ರಾಜೀನಾಮೆಗೂ, ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಮಾಧ್ಯಮದಲ್ಲಷ್ಟೇ ಅವರ ಹೆಸರು ಕೇಳಿಬರುತ್ತಿದೆ. ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ಬಳಿಕ ತೀರ್ಮಾನಿಸಲಾಗುವುದು ಎಂದರು.
ಕೊರಟಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಇದನ್ನೂ ಓದಿ:ಸತ್ತ ಆನೆ ಮರಿ ಎಬ್ಬಿಸಲು ಮೂರು ಆನೆಗಳ ಪ್ರಯತ್ನ - ಕರುಳು ಹಿಂಡುವಂತಿತ್ತು ದೃಶ್ಯ!
ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಿದ್ದೇ ನಮ್ಮ ಪಕ್ಷದ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಮಂಗಳವಾರ ಕಾಂಗ್ರೆಸ್ ಸಭೆಯಲ್ಲಿ ದಲಿತರು, ಅಲ್ಪಸಂಖ್ಯಾತರು ಒಂದಾಗಬೇಕು ಎಂದು ಕರೆ ನೀಡಿದ್ದಾರೆ. ಜಾತಿ ಹೆಸರಿನಲ್ಲಿ ಚರ್ಚೆ ನಡೆದಿದ್ದು, ಕಾಂಗ್ರೆಸ್ನವರು ಜೈ ಅಹಿಂದ್ ಎಂದು ಘೋಷಣೆ ಕೂಗಲು ಹೊರಟಿದ್ದಾರೆ. ಚುನಾವಣೆಯಲ್ಲಿ ಮತ ಪಡೆಯಲು ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೆಚ್ಡಿಕೆ ಆರೋಪಿಸಿದರು.
ಇದನ್ನೂ ಓದಿ:Video: ದಿಢೀರ್ ಕಾರ್ನ ಬಾಗಿಲು ತೆರೆದ ಚಾಲಕ.. ಟ್ರಕ್ನಡಿ ಸಿಲುಕಿ ಸ್ಥಳದಲ್ಲೇ ಹಾರಿಹೋಯ್ತು ಬೈಕ್ ಸವಾರನ ಪ್ರಾಣ
ಬಿಟ್ ಕಾಯಿನ್ ಹಗರಣ (Karnataka Bitcoin scam) ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಅವರು, 2016 ರಲ್ಲೇ ಬಿಟ್ ಕಾಯಿನ್ ದಂಧೆ ನಡೆದಿತ್ತು. ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ, ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.