ತುಮಕೂರು : ತಾಲೂಕಿನ ಗಡಿ ಭಾಗದಲ್ಲಿ ನಿರಂತರವಾಗಿ ಚಿರತೆಗಳು ದಾಳಿ ಮುಂದುವರೆದಿದೆ. ಪದೆ ಪದೆ ಚಿರತೆಗಳು ಎಲ್ಲಿಂದ ಬರುತ್ತಿವೆ ಎಂಬ ಅನುಮಾನ ಗ್ರಾಮಸ್ಥರಲ್ಲಿ ಮನೆಮಾಡಿದ್ದು, ಅದಕ್ಕಾಗಿ ಶಾಸಕ ಗೌರಿಶಂಕರ್ ನೂತನ ಯೋಜನೆಯೊಂದು ರೂಪಿಸಿದ್ದಾರೆ.
ಚಿರತೆ ಬಿಡಲು ಅರಣ್ಯಾಧಿಕಾರಿಗಳ ಜೊತೆ ಗ್ರಾಮಸ್ಥರು ಹೋಗಿ ಖಚಿತಪಡಿಸಿಕೊಳ್ಳಿ: ಶಾಸಕ ಗೌರಿಶಂಕರ್ - ತುಮಕೂರು ಚಿರತೆ ದಾಳಿ
ಚಿರತೆ ದಾಳಿಯಿಂದ ಬೇಸತ್ತ ಜನರ ಅನುಮಾನ ಬಗೆಹರಿಸಲು ಶಾಸಕ ಗೌರಿಶಂಕರ ಚಿರತೆಯನ್ನು ಬಿಡುವ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮದ ಇಬ್ಬರು ತೆರಳಿ ಖಚಿತಪಡಿಸಿಕೊಳ್ಳಿ, ಇದಕ್ಕೆ ನಾನು ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಶಾಸಕ ಗೌರಿಶಂಕರ್
ಇಂದು ತುಮಕೂರು ತಾಲೂಕಿನ ಬಡೆಸಾಬರ ಪಾಳ್ಯದಲ್ಲಿ ಬೋನಿಗೆ ಬಿದ್ದ ಚಿರತೆಯನ್ನು ಬಂಡಿಪುರ ಅರಣ್ಯ ಪ್ರದೇಶದ ವ್ಯಾಪ್ತಿಗೆ ಸ್ಥಳಾಂತರಿಸಲು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ. ಚಿರತೆಯನ್ನು ಬಿಡುವ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮದ ಇಬ್ಬರು ತೆರಳಿ ಖಚಿತಪಡಿಸಿಕೊಳ್ಳಿ. ಇದಕ್ಕೆ ನಾನು ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಚಿರತೆ ಬಿಡಲು ಅರಣ್ಯಾಧಿಕಾರಿಗಳ ಜೊತೆ ಗ್ರಾಮಸ್ಥರು ಹೋಗಿ ಖಚಿತಪಡಿಸಿಕೊಳ್ಳಿ
ಇನ್ನೊಂದೆಡೆ ಕಳೆದ ಹದಿನೈದು ದಿನದಿಂದ ಈ ಭಾಗದಲ್ಲಿ ಚಿರತೆಗಳು ನಿತ್ಯ ಕುರಿ ಹಾಗೂ ಜಾನುವಾರುಗಳನ್ನು ಕೊಂದುಹಾಕಿದ್ದು, ಅರಣ್ಯ ಇಲಾಖೆ ವತಿಯಿಂದ ಪೂರಕವಾದ ಪರಿಹಾರದ ವ್ಯವಸ್ಥೆಯನ್ನು ಮಾಡುವುದಾಗಿಯೂ ಗ್ರಾಮಸ್ಥರಿಗೆ ಭರವಸೆ ನೀಡಿದರು.