ಕರ್ನಾಟಕ

karnataka

ETV Bharat / city

ಅವ್ಯವಸ್ಥೆಯ ಅಗರವಾದ ಗುಡ್ಡೇನಹಳ್ಳಿ ಕ್ವಾರಂಟೈನ್​ ಕೇಂದ್ರ.. ವಿಡಿಯೋ ವೈರಲ್​ - Goodenahalli Quarantine Center clean problem

ಚಿಕಿತ್ಸೆಗಾಗಿ ಬಳಸಿರುವ ಅನುಪಯುಕ್ತ ವಸ್ತುಗಳನ್ನು ಕೂಡ ಕೇಂದ್ರದ ಆವರಣದಲ್ಲಿ ಎಸೆಯಲಾಗಿದೆ. ಇದರಿಂದಾಗಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಸ್ವಚ್ಛತೆ ಇಲ್ಲದೆ ಒದ್ದಾಡುವಂತಾಗಿದೆ..

Goodenahalli Quarantine Center
ಗುಡ್ಡೇನಹಳ್ಳಿ ಕ್ವಾರಂಟೈನ್​ ಕೇಂದ್ರ

By

Published : May 23, 2021, 9:13 PM IST

ತುಮಕೂರು : ಜಿಲ್ಲೆಯ ತುರುವೇಕೆರೆ ತಾಲೂಕಿನ ಗುಡ್ಡೇನಹಳ್ಳಿಯಲ್ಲಿ ತೆರೆಯಲಾಗಿರುವ ಕ್ವಾರಂಟೈನ್ ಕೇಂದ್ರವು ಅವ್ಯವಸ್ಥೆಯ ಅಗರವಾಗಿದ್ದು, ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ.

ಅವ್ಯವಸ್ಥೆಯ ಅಗರವಾದ ಗುಡ್ಡೇನಹಳ್ಳಿ ಕ್ವಾರಂಟೈನ್​ ಕೇಂದ್ರ..

ಕೇಂದ್ರದಲ್ಲಿ ಗುಣಮುಖರಾಗಿ ಡಿಸ್ಚಾರ್ಚ್​​ ಆಗಿರುವ ಸೋಂಕಿತರು ಬಳಸಿದ ವಸ್ತುಗಳನ್ನು ಕೂಡ ಸರಿಯಾದ ವಿಲೇವಾರಿ ಮಾಡಿಲ್ಲ. ಎಲ್ಲೆಂದರಲ್ಲಿ ಬಿಸಾಡಲಾಗಿದೆ.

ಚಿಕಿತ್ಸೆಗಾಗಿ ಬಳಸಿರುವ ಅನುಪಯುಕ್ತ ವಸ್ತುಗಳನ್ನು ಕೂಡ ಕೇಂದ್ರದ ಆವರಣದಲ್ಲಿ ಎಸೆಯಲಾಗಿದೆ. ಇದರಿಂದಾಗಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಸ್ವಚ್ಛತೆ ಇಲ್ಲದೆ ಒದ್ದಾಡುವಂತಾಗಿದೆ.

ಸೋಂಕಿತರಿಗೆ ಇಲ್ಲಿ ನೀಡಲಾಗುವ ಆಹಾರದ ವ್ಯವಸ್ಥೆಯಲ್ಲಿಯೂ ಕೂಡ ಸಾಕಷ್ಟು ನಿರ್ಲಕ್ಷ್ಯ ಭಾವನೆ ತಾಳಲಾಗಿದೆ. ಇದರಿಂದ ಬೇಸತ್ತ ಸೋಂಕಿತರು ತಮ್ಮ ಮೊಬೈಲ್​ಗಳಲ್ಲಿ ಕ್ವಾರಂಟೈನ್ ಕೇಂದ್ರದ ಅವ್ಯವಸ್ಥೆಯನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

ABOUT THE AUTHOR

...view details