ಕರ್ನಾಟಕ

karnataka

ETV Bharat / city

CM ಬೊಮ್ಮಾಯಿ ಸಂಪುಟದಲ್ಲಿ ರಾಜಕೀಯ ಮೇಧಾವಿಗಳು ಕಡಿಮೆ : ಜಿ. ಪರಮೇಶ್ವರ್ - ತುಮಕೂರು

ಒಂದು ವರ್ಷ ಹತ್ತು ತಿಂಗಳು ನಡೆಸಿಕೊಂಡು ಹೋಗಬಹುದು. ರಾಜ್ಯಕ್ಕೆ ಕೊಡುವ ಕೊಡುಗೆಯಲ್ಲಿ ಯಾವ ರೀತಿ ಇರುತ್ತದೆ ಎಂದು ನೋಡಬೇಕು. ಕರ್ನಾಟಕದಲ್ಲಿ ರಾಜಕೀಯ ಹೊಸ ತಿರುವು ಕಾಣುತ್ತಿದೆ. ಬಸವರಾಜ ಬೊಮ್ಮಾಯಿ ಅವರು ನೂತನ ಸಿಎಂ ಆಗಿದ್ದಾರೆ. ಅವರ ದೂರದೃಷ್ಟಿ ಯಾವ ರೀತಿ ಇದೆ ಎಂಬುದು ಆರೇಳು ತಿಂಗಳಲ್ಲಿ ಗೊತ್ತಾಗಲಿದೆ..

G. Parameshwar
ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್

By

Published : Aug 6, 2021, 8:21 PM IST

ತುಮಕೂರು :ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಸಂಪುಟದಲ್ಲಿ ರಾಜಕೀಯ ಮೇಧಾವಿತನ ಇರುವವರು ಕಡಿಮೆಯಿದ್ದಾರೆ. ಮುಖ್ಯಮಂತ್ರಿ ತಪ್ಪು ಮಾಡಿದರೆ ತಿದ್ದಿ, ಒಳ್ಳೆಯ ದಾರಿ ತೋರಿಸುವವರು ಇರಬೇಕು. ಆದರೆ, ಅಂತಹದ್ದೇನು ಕಾಣುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅಭಿಪ್ರಾಯ ಪಟ್ಟಿದ್ದಾರೆ.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಅವರ ಹಿರಿತನವನ್ನು ಯಡಿಯೂರಪ್ಪನವರಿಗೆ ಹೋಲಿಸಲು ಸಾಧ್ಯವಿಲ್ಲ. ರಾಜ್ಯವನ್ನು ಯಾವ ರೀತಿ ತೆಗೆದುಕೊಂಡು ಹೋಗಲಿದ್ದಾರೆ ಎಂಬುದನ್ನು ನೋಡಬೇಕಾಗಿದೆ. ಈ ಸರ್ಕಾರದ ಬಗ್ಗೆ ಹೆಚ್ಚಿನ ನಿರೀಕ್ಷೆ ಕಾಣುತ್ತಿಲ್ಲ ಎಂದರು.

ಬೊಮ್ಮಾಯಿ ಸಂಪುಟದಲ್ಲಿ ರಾಜಕೀಯ ಮೇಧಾವಿಗಳು ಕಡಿಮೆ : ಜಿ. ಪರಮೇಶ್ವರ್

ಒಂದು ವರ್ಷ ಹತ್ತು ತಿಂಗಳು ನಡೆಸಿಕೊಂಡು ಹೋಗಬಹುದು. ರಾಜ್ಯಕ್ಕೆ ಕೊಡುವ ಕೊಡುಗೆಯಲ್ಲಿ ಯಾವ ರೀತಿ ಇರುತ್ತದೆ ಎಂದು ನೋಡಬೇಕು. ಕರ್ನಾಟಕದಲ್ಲಿ ರಾಜಕೀಯ ಹೊಸ ತಿರುವು ಕಾಣುತ್ತಿದೆ. ಬಸವರಾಜ ಬೊಮ್ಮಾಯಿ ಅವರು ನೂತನ ಸಿಎಂ ಆಗಿದ್ದಾರೆ. ಅವರ ದೂರದೃಷ್ಟಿ ಯಾವ ರೀತಿ ಇದೆ ಎಂಬುದು ಆರೇಳು ತಿಂಗಳಲ್ಲಿ ಗೊತ್ತಾಗಲಿದೆ ಎಂದರು.

ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಇಡಿ ದಾಳಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಮೊದಲಿನಿಂದಲೂ ಇಡಿ, ಸಿಬಿಐ, ಐಟಿ ಬಳಕೆ ಮಾಡಿಕೊಳ್ಳುತ್ತದೆ ಎಂದು ಹೇಳುತ್ತ ಬಂದಿದ್ದೇವೆ. ಯಾವ ಉದ್ದೇಶಕ್ಕಾಗಿ ದಾಳಿ ನಡೆದಿದೆ ಎಂದು ಗೊತ್ತಿಲ್ಲ. ಅವರು ಕೂಡ ಸ್ಪಷ್ಟಪಡಿಸಿಲ್ಲ. ಮುಂದಿನ ದಿನಗಳಲ್ಲಿ ಯಾವ ಆಧಾರದ ಮೇಲೆ ದಾಳಿ ಮಾಡಿದರು ಎಂಬುದನ್ನು ತಿಳಿಸಲಿದ್ದಾರೆ. ಬಳಿಕ ನಾವು ಟೀಕೆ-ಟಿಪ್ಪಣಿ ಮಾಡಬಹುದು. ಐಎಂಎ ಕೇಸ್ ಲಿಂಕ್ ಆಧಾರ ಮೇಲೆ ದಾಳಿ ಮಾಡಿದ್ದೇನೆ ಎಂದು ಅವರು ಹೇಳಿಲ್ಲ ಎಂದರು.

ABOUT THE AUTHOR

...view details