ತುಮಕೂರು:ಬೇರೆ ದೇಶಗಳಿಂದ ಪ್ರತಿಕ್ರಿಯೆ ಬರುವ ಮೊದಲು ಪ್ರವಾದಿ ವಿರುದ್ಧದ ಹೇಳಿಕೆಗೆ ಬಿಜೆಪಿ ಅದಕ್ಕೆ ಸ್ಪಷ್ಟನೆ ಕೊಡಬೇಕಿತ್ತು. ಈಗ ಆ ಹೇಳಿಕೆಯಿಂದ ನಾವು ದೂರ ಇದ್ದೇವೆ ಎನ್ನುತ್ತಾರೆ. ಇವತ್ತು ಭಾರತದ ಗೌರವವನ್ನು ಹರಾಜು ಹಾಕುವ ಸ್ಥಿತಿಗೆ ಬಂದಂತಾಗಿದೆ. ಬಿಜೆಪಿ ಸರ್ಕಾರ ನಮ್ಮ ದೇಶವನ್ನು ಪ್ರತಿನಿಧಿಸುತ್ತಿದೆ. ಹಾಗಾಗಿ ಬಿಜೆಪಿಯೇ ಕ್ಷಮೆ ಕೇಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊರ ದೇಶಗಳಿಂದ ಬೆದರಿಕೆ ಬರುತ್ತಿದೆ. ಆಲ್ ಖೈದಾದವರು ನಾವು ಮತ್ತೆ ನಮ್ಮ ಚಟುವಟಿಕೆ ಶುರು ಮಾಡುತ್ತೇವೆ ಎಂದಿದ್ದಾರೆ. ಇದಕ್ಕೆ ಬಿಜೆಪಿ ಸರ್ಕಾರವೇ ನೇರವಾದ ಕಾರಣ ಎಂದು ದೂರಿದರು.