ಕರ್ನಾಟಕ

karnataka

ETV Bharat / city

ಭತ್ತ ಖರೀದಿಸಿ ಹಣ ನೀಡದೆ ರೈಸ್ ಮಿಲ್ ಮಾಲೀಕನಿಂದ ವಂಚನೆ ಆರೋಪ: ರೈತರಿಂದ ಮನೆಗೆ ಮುತ್ತಿಗೆ - ಭತ್ತ ಖರೀದಿಸಿ ಹಣ ನೀಡದೆ ರೈಸ್ ಮಿಲ್ ಮಾಲೀಕನಿಂದ ವಂಚನೆ

ತುಮಕೂರಿನ ಚಂದ್ರಧರ ರೈಸ್ ಮಿಲ್ ಮಾಲೀಕ ಭತ್ತ ಖರೀದಿ ಮಾಡಿ ಹಣ ನೀಡದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ರೈತರು ಅವರ ಮನೆಗೆ ಮುತ್ತಿಗೆ ಹಾಕಿದ್ದಾರೆ.

cheating allegations against Rice Mill owner
ಚಂದ್ರಧರ ರೈಸ್ ಮಿಲ್​​ನ ಮಾಲೀಕನ ಮನೆಗೆ ರೈತರ ಮುತ್ತಿಗೆ

By

Published : Dec 11, 2021, 8:52 AM IST

ತುಮಕೂರು: ನಗರದ ರೈಸ್ ಮಿಲ್ ಮಾಲೀಕರೊಬ್ಬರು ಭತ್ತ ಖರೀದಿ ಮಾಡಿ ಹಣ ನೀಡದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ರೈತರು ಅವರ ಮನೆಗೆ ಮುತ್ತಿಗೆ ಹಾಕಿರುವ ಘಟನೆ ನಿನ್ನೆ(ಶುಕ್ರವಾರ) ನಡೆದಿದೆ.

ವಂಚನೆ ಆರೋಪ:ರೈಸ್ ಮಿಲ್​​ನ ಮಾಲೀಕನ ಮನೆಗೆ ರೈತರ ಮುತ್ತಿಗೆ

ತುಮಕೂರಿನ ಅಂತರಸನಹಳ್ಳಿ ಬೈಪಾಸ್ ಪಕ್ಕದಲ್ಲಿರುವ ಚಂದ್ರಧರ ರೈಸ್ ಮಿಲ್​​ನ ಮಾಲೀಕ ರಮೇಶ್ ಎಂಬುವರು ಉತ್ತರ ಕರ್ನಾಟಕ ಭಾಗದ ರೈತರಿಗೆ ವಂಚನೆ ಮಾಡಿದ್ದಾರೆ ಎಂದು ರೈತರು ಆರೋಪಿದ್ದಾರೆ. 13 ಟ್ರಕ್​​ಗಳಲ್ಲಿ ಭತ್ತವನ್ನು ತಂದು ರೈತರು ರೈಸ್ ಮಿಲ್​​ಗೆ ಮಾರಿದ್ದರು. ಸುಮಾರು 80 ಲಕ್ಷಕ್ಕೂ ಅಧಿಕ ಹಣವನ್ನು ನೀಡದೆ ಸತಾಯಿಸುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.

ಉತ್ತರ ಕರ್ನಾಟಕದ ಬಳ್ಳಾರಿ, ಕಂಪ್ಲಿ, ದಾವಣಗೆರೆ, ಸಿಂದಗೇರಿ ಮತ್ತು ಆಂಧ್ರ ಪ್ರದೇಶ ಭಾಗದ ರೈತರಿಗೆ ರೈಸ್ ಮಿಲ್ ಮಾಲೀಕ ರಮೇಶ್ ವಂಚಿಸಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಹಣ ನೀಡುವಂತೆ ಆಗ್ರಹಿಸಿ ರೈತರು ಮನೆಗೆ ಮುತ್ತಿಗೆ ಹಾಕಿದ್ದರು.

ABOUT THE AUTHOR

...view details