ತುಮಕೂರು:ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಬಗ್ಗೆ ಜಿಲ್ಲಾಡಳಿತ ತಪ್ಪು ಮಾಹಿತಿ ನೀಡುತ್ತಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಆರೋಪಿಸಿದ್ದಾರೆ.
ಕೋವಿಡ್ನಿಂದ ಮೃತಪಟ್ಟವರ ಬಗ್ಗೆ ಜಿಲ್ಲಾಡಳಿತ ತಪ್ಪು ಮಾಹಿತಿ ನೀಡುತ್ತಿದೆ: ಟಿ.ಬಿ.ಜಯಚಂದ್ರ ಆರೋಪ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾವಿನ ಸಂಖ್ಯೆ ಬಗ್ಗೆ ಅನುಮಾನಗೊಂಡು ಶಿರಾ ತಾಲೂಕಿನಲ್ಲಿ ಓರ್ವನನ್ನು ವೈಯಕ್ತಿಕವಾಗಿ ನೇಮಿಸಿದ್ದೆ. ಶಿರಾ ತಾಲೂಕು ಒಂದರಲ್ಲಿಯೇ 63 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದ್ರೆ, ನಾನು ವೈಯಕ್ತಿಕವಾಗಿ ನೇಮಿಸಿರುವ ವ್ಯಕ್ತಿ 154 ಮಂದಿಯ ಶವಗಳು ತಾಲೂಕಿನ ವಿವಿಧ ಆಸ್ಪತ್ರೆಗಳಿಂದ ಹೊರಬಂದಿವೆ ಎಂದು ತಿಳಿಸಿದ್ದಾರೆ.
ನೂರಕ್ಕೆ ನೂರು ಜನ ಸಾವನ್ನಪ್ಪುತ್ತಿರೋದು ಕೋವಿಡ್ನಿಂದಲೇ. ಆದರೆ, ಕೋವಿಡ್ ಹಾಗು ಕೋವಿಡೇತರ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 911 ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ.
ಆದರೆ, ಜಿಲ್ಲಾಡಳಿತ ಸಾವಿನ ಸಂಖ್ಯೆ ಮುಚ್ಚಿಡುವ ಯತ್ನವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ. ಸರ್ಕಾರದ ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು ಸತ್ತರೆ ಮಾತ್ರ ಕೋವಿಡ್ ಸಾವು ಎಂದು ಪರಿಗಣಿಸಲಾಗುತ್ತದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ, ನಾವೆಲ್ಲ ಬಿಎಸ್ವೈ ಜೊತೆಗಿದ್ದೇವೆ: ರೇಣುಕಾಚಾರ್ಯ