ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಧುಸ್ವಾಮಿ ವಿರುದ್ಧ ಪಿಸುಗುಟ್ಟಿರುವ ಸಂಸದ ಜಿ.ಎಸ್ ಬಸವರಾಜು ಅವರಿಗೆ ಮಂಪರು ಪರೀಕ್ಷೆ ಮಾಡಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದ್ದಾರೆ.
ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ವಿ.ಸೋಮಣ್ಣ ಅವರಿಂದ ಅಪ್ಪ - ಮಕ್ಕಳು (ಜಿ.ಎಸ್ ಬಸವರಾಜು ಮತ್ತು ಶಾಸಕ ಜ್ಯೋತಿ ಗಣೇಶ್) ಬಿಜೆಪಿ ಸೇರಿದ್ದಾರೆ. ಅವರು ಯಡಿಯೂರಪ್ಪ ಹಾಗೂ ಸೋಮಣ್ಣ ಅವರ ಪಾದ ಪೂಜೆ ಮಾಡಬೇಕು ಎಂದು ಹೇಳಿದರು.
ಜಿಲ್ಲೆಯ ಎಲ್ಲ ಕೆರೆ - ಕಟ್ಟೆಗಳು ತುಂಬಿದೆ. ಇಡೀ ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಚಿವ ಜೆ.ಸಿ ಮಧುಸ್ವಾಮಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುತ್ತಿದ್ದಾರೆ. ವೈ.ಕೆ ರಾಮಯ್ಯ ಮೊದಲಾದವರು ನೀರಿಗಾಗಿ ಹೋರಾಟ ಮಾಡಿದ್ದರು. ಯಾವ ಹೋರಾಟವನ್ನು ಮಾಡದಿದ್ದರೂ, ಭಗೀರಥ ಎಂದು ಕರೆಸಿಕೊಳ್ಳಲು ಸಂಸದ ಜಿ.ಎಸ್ ಬಸವರಾಜು ಹೊರಟಿದ್ದಾರೆ ಎಂದು ಕಿಡಿ ಕಾರಿದರು.