ತುಮಕೂರು :ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ಚೈನಾ ಮಾಡೆಲ್ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದ್ದಾರೆ.
ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಡಿಹಳ್ಳಿ ಚಂದ್ರಶೇಖರ್ ಕಮ್ಯೂನಿಸ್ಟ್ ನಿಬಂಧನೆಗಳನ್ನು ಬಲವಂತವಾಗಿ ಹೇರುವ ಮೂಲಕ ಸಾರಿಗೆ ನೌಕರರ ಹೋರಾಟ ದಾರಿ ತಪ್ಪಿಸುತ್ತಿದ್ದಾನೆ. ಕೋವಿಡ್ ಸಂದರ್ಭದಲ್ಲಿ ಈತ ರೈತರ ನೆರವಿಗೆ ನಿಂತಿಲ್ಲ. ರೈತರ ತರಕಾರಿಗಳು ರಸ್ತೆಗೆ ಬಿದ್ದಿದ್ದವು.
ನಾವು ರೈತರ ತರಕಾರಿಗಳನ್ನು ಬೆಂಗಳೂರಿಗೆ ರವಾನಿಸಿ, ಮಾರಾಟ ಮಾಡಿದ್ದೆವು. ಈತನಿಗೆ ಮಾನ-ಮರ್ಯಾದೆ ಇಲ್ವಾ?. ಸಾರಿಗೆ ನೌಕರರನ್ನು ಎತ್ತಿಕಟ್ಟುತ್ತೇನೆ ಅಂತಾನೆ, ನಾಚಿಕೆ ಆಗಬೇಕು. ಈತನನ್ನು ಮೇಧಾವಿ ಅಂದುಕೊಂಡಿದ್ದೆ. ಈತ ವ್ಯವಸ್ಥೆಯನ್ನ ಬುಡಮೇಲು ಮಾಡುವಂತಹ ಮೇಧಾವಿ ಎಂದರು.
ಓದಿ:ಕೋಡಿ 'ಹುಳಿ' ಬಳಸಿಕೊಂಡು ಮತ್ತೆ ಅಧಿಕಾರಕ್ಕೆ ಬರುವ ಕನಸು ಕನಸಾಗೇ ಇರುತ್ತೆ: ಸಿ.ಟಿ. ರವಿ ಟಾಂಗ್
ಈತನನ್ನ ಸರ್ಕಾರ ಯಾಕೆ ಸುಮ್ಮನೆ ಬಿಟ್ಟಿದೆ. ದೇಶದ ಕಾನೂನನ್ನು ಅಳವಡಿಸಿ ಚಂದ್ರಶೇಖರ್ನ ಅರೆಸ್ಟ್ ಮಾಡಿ ಒಳಗೆ ಹಾಕಿದ್ರೆ, ಇಷ್ಟೊಂದು ಅಹಿತಕರ ಘಟನೆ ನಡೆಯುತ್ತಿರಲಿಲ್ಲ ಎಂದರು.