ತುಮಕೂರು: ಚಿರತೆಯೊಂದು ಐದು ವರ್ಷದ ಬಾಲಕನನ್ನು ಬಲಿ ತೆಗೆದುಕೊಂಡ ಘಟನೆ ಗುಬ್ಬಿ ತಾಲೂಕಿನ ಮಣಿಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಐದು ವರ್ಷದ ಬಾಲಕನನ್ನು ಬಲಿ ತೆಗೆದುಕೊಂಡ ಚಿರತೆ - ಐದು ವರ್ಷದ ಬಾಲಕನನ್ನು ಬಲಿ ತೆಗೆದುಕೊಂಡ ಚಿರತೆ
ಚಿರತೆಯೊಂದು ಐದು ವರ್ಷದ ಬಾಲಕನನ್ನು ಬಲಿ ತೆಗೆದುಕೊಂಡ ಘಟನೆ ಗುಬ್ಬಿ ತಾಲೂಕಿನ ಮಣಿಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಚಿರತೆ ದಾಳಿಗೆ ಬಾಲಕ ಬಲಿ
ಚಿರತೆ ದಾಳಿಗೆ ಬಾಲಕ ಬಲಿ
ಸಮಥ೯ ಗೌಡ (5) ಚಿರತೆಗೆ ಬಲಿಯಾದ ಬಾಲಕ. ಇಂದು ಮಧ್ಯಾಹ್ನ ಸುಮಾರು 3.45 ಕ್ಕೆ ಈ ಘಟನೆ ನಡೆದಿದೆ. ಶಿವಕುಮಾರ್ ಎಂಬುವವರ ಮಗ ಸಮಥ೯ ಗೌಡನ ಮೇಲೆ ಚಿರತೆ ದಾಳಿ ನಡೆಸಿ, ಬಾಲಕನ ಕುತ್ತಿಗೆಯನ್ನು ಕಚ್ಚಿ ಕೊಂದು ಹಾಕಿದೆ. ಮಗನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಕಳೆದ ಎರಡು ವರೆ ತಿಂಗಳಿನಿಂದ ತುಮಕೂರು ತಾಲೂಕು, ಕುಣಿಗಲ್ ಹಾಗೂ ಗುಬ್ಬಿ ತಾಲೂಕಿನ ವ್ಯಾಪ್ತಿಯಲ್ಲಿ ಚಿರತೆ, ದಾಳಿ ನಡೆಸುತ್ತಿದ್ದು, ಈ ವರೆಗೆ ಮೂವರನ್ನು ಬಲಿ ತೆಗೆದುಕೊಂಡಿದೆ. ಚಿರತೆ ಹಾವಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ.