ತುಮಕೂರು/ಪಾವಗಡ: ಆಂದ್ರಿನಿವಾ ಯೋಜನೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ನಾಗಲಮಡಿಕೆ ಹೋಬಳಿಯ ಸಾವಿರಾರು ರೈತರು ಗ್ರಾಮದಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಆಂದ್ರಿನಿವಾ ಯೋಜನೆ ಸ್ಥಗಿತ ಖಂಡಿಸಿ ರೈತರ ಪ್ರತಿಭಟನೆ - Farmer protests for shutdown of the Andriniva project
ನಾಗಲಮಡಿಕೆ ಹೋಬಳಿಯ ಸಾವಿರಾರು ರೈತರು ಗ್ರಾಮದಲ್ಲಿ ರಸ್ತೆ ತಡೆದು ಆಂದ್ರಿನಿವಾ ಯೋಜನೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಇತರೆ ಹಸಿರು ಸೇನೆ ತಾಲೂಕು ಅದ್ಯಕ್ಷ ಪೂಜಾರಪ್ಪ ಮಾತನಾಡಿ, ಮಡಕಶಿರ ಗಡಿ ಭಾಗದಲ್ಲಿ ಬರ ತಾಂಡವವಾಡುತ್ತಿದ್ದು, ಎರಡು ತಾಲೂಕಿಗೆ ನೀರುಬೇಕಾಗಿದೆ. ಆದರೆ ಯಾರದ್ದೋ ಒತ್ತಡದಿಂದ ತಹಶೀಲ್ದಾರರು ಆಂದ್ರಿನಿವಾ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಆರೋಪಿಸಿ, ಪಾವಗಡ ಆಂದ್ರ ಎಂಬ ಭೇದಭಾವ ಮಾಡದೆ ನೀರು ಬೀಡಿ ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪಾವಗಡಕ್ಕೆ 2 ಟಿಎಂಸಿ ನೀರು ಕೊಡಲು ಮನವಿ ಮಾಡಲಾಗಿತ್ತು, ಹಾಗೂ ಆಂದ್ರಿನಿವಾ ಯೋಜನೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಲಾಗಿತ್ತು. ಇಂದು ಆಂಧ್ರ ಸರ್ಕಾರದ ಯೋಜನೆಯಾಗಿದ್ದು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಆಗತ್ಯ ನೆರವು ನೀಡುವ ಮೂಲಕ ಯೋಜನೆ ಪೂರ್ಣಗೋಳಿಸಬೇಕೆಂದರು.