ತುಮಕೂರು:ಜಿಲ್ಲೆಯ ಕುಟುಂಬವೊಂದು ಅಬುಧಾಬಿಯಲ್ಲಿ ಸಿಲುಕಿಕೊಂಡಿದ್ದು, ಕರ್ನಾಟಕಕ್ಕೆ ಬರಲು ಸಾಧ್ಯವಾಗದೆ ಇಕ್ಕಟ್ಟಿನಲ್ಲಿದೆ.
ಅಬುಧಾಬಿಯಿಂದ ನಮ್ಮನ್ನೂ ರಾಜ್ಯಕ್ಕೆ ಕರೆಸಿಕೊಳ್ಳಿ... ಸೆಲ್ಫಿ ವಿಡಿಯೋ ಮೂಲಕ ತುಮಕೂರಿನ ಕುಟುಂಬ ಮನವಿ - Tumkur News
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಸಂಪಿಗೆ ಗ್ರಾಮದ ಮೋಹನ್ ರಾಜ್ ಕುಟುಂಬ ವಿಮಾನ ಸಿಗದೆ ಅಬುಧಾಬಿಯಲ್ಲಿ ಸಿಲುಕಿಕೊಂಡಿದ್ದು, ನಮ್ಮನ್ನೂ ರಾಜ್ಯಕ್ಕೆ ಕರೆಸಿಕೊಳ್ಳಿ ಎಂದು ಸೆಲ್ಫಿ ವಿಡಿಯೋ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
![ಅಬುಧಾಬಿಯಿಂದ ನಮ್ಮನ್ನೂ ರಾಜ್ಯಕ್ಕೆ ಕರೆಸಿಕೊಳ್ಳಿ... ಸೆಲ್ಫಿ ವಿಡಿಯೋ ಮೂಲಕ ತುಮಕೂರಿನ ಕುಟುಂಬ ಮನವಿ family appealed to government through a selfie video](https://etvbharatimages.akamaized.net/etvbharat/prod-images/768-512-7204344-55-7204344-1589516116332.jpg)
ನಮ್ಮನ್ನೂ ರಾಜ್ಯಕ್ಕೆ ಕರೆಸಿಕೊಳ್ಳಿ..ಸೆಲ್ಫಿ ವಿಡಿಯೋ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ ಕುಟುಂಬ
ನಮ್ಮನ್ನೂ ರಾಜ್ಯಕ್ಕೆ ಕರೆಸಿಕೊಳ್ಳಿ.. ಸೆಲ್ಫಿ ವಿಡಿಯೋ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ ಕುಟುಂಬ
ತುರುವೇಕೆರೆ ತಾಲೂಕಿನ ಸಂಪಿಗೆ ಗ್ರಾಮದ ಮೋಹನ್ ರಾಜ್, ಅವರ ಏಳು ತಿಂಗಳ ಗರ್ಭಿಣಿ ಪತ್ನಿ, ಮಗು ಹಾಗೂ ಅತ್ತೆ-ಮಾವ ಅಬುಧಾಬಿಯಿಂದ ರಾಜ್ಯಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ದುಬೈನಲ್ಲಿ ನೆಲೆಸಿರುವವರಿಗೆ ಮಾತ್ರ ರಾಜ್ಯಕ್ಕೆ ಬರಲು ವಿಮಾನದ ವ್ಯವಸ್ಥೆ ಮಾಡಲಾಗಿದೆ. ಆದರೆ, ಅಬುಧಾಬಿಯಲ್ಲಿರುವ ಮೋಹನ್ ರಾಜ್ ಕುಟುಂಬಕ್ಕೆ ವಿಮಾನ ಸಿಗದೆ ಪರದಾಡುತ್ತಿದೆ.
ಹೀಗಾಗಿ ನಮ್ಮನ್ನೂ ರಾಜ್ಯಕ್ಕೆ ಕರೆಸಿಕೊಳ್ಳಿ ಎಂದು ಸೆಲ್ಫಿ ವಿಡಿಯೋ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.