ಕರ್ನಾಟಕ

karnataka

ETV Bharat / city

ಕುಮಾರಸ್ವಾಮಿ ಎಲ್ಲಿದ್ದೀಯಪ್ಪ ಎಂದು ಕೇಳುವ ಪರಿಸ್ಥಿತಿ ಇದೆ: ಮಾಜಿ ಶಾಸಕ - Congress and JDS

ವಿ.ಸೋಮಣ್ಣರ ಅಧ್ಯಕ್ಷತೆಯಲ್ಲಿ ಬಿಜೆಪಿ ಪಕ್ಷ ಸೇರಿದ ಕೈ-ದಳದ ಕಾರ್ಯಕರ್ತರು. ಮಾಜಿ ಶಾಸಕ ಸುರೇಶ್ ಗೌಡ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಜೆಡಿಎಸ್​ಗೆ ಟಾಂಗ್​.

ಮಾಜಿ ಶಾಸಕ ಸುರೇಶ್ ಗೌಡ

By

Published : Apr 11, 2019, 9:47 PM IST

ತುಮಕೂರು: ನಿಖಿಲ್ ಎಲ್ಲಿದ್ದೀಯಪ್ಪ ಎಂದು ಮಂಡ್ಯದಲ್ಲಿ ಮಾತುಗಳು ಹೇಗೆ ಹರಿದಾಡುತ್ತಿವೆಯೋ ಅದೇ ರೀತಿ ರೈತರು ಮತ್ತು ರಾಜ್ಯದ ಮತದಾರರು ಕುಮಾರಸ್ವಾಮಿ ಎಲ್ಲಿದ್ಧೀಯಪ್ಪ ಎಂದು ಕೇಳುವ ಪರಿಸ್ಥಿತಿ ಉಂಟಾಗಿದೆ ಎಂದು ತುಮಕೂರಿನ ಗ್ರಾಮಾಂತರ ಮಾಜಿ ಶಾಸಕ ಸುರೇಶ್ ಗೌಡ ವ್ಯಂಗ್ಯವಾಡಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ತುಮಕೂರು ಜಿಲ್ಲೆಗೆ ಹೆಚ್ಎಎಲ್, ಸ್ಮಾರ್ಟ್ ಸಿಟಿ, ಫುಡ್ ಪಾರ್ಕ್, ಪಾಸ್​ಪೋರ್ಟ್ ಕಚೇರಿಯೇ ಮೋದಿ ಅವರ ಕಾರ್ಯಗಳನ್ನು ತಿಳಿಸುತ್ತವೆ. ಆದರೆ ವಿರೋಧ ಪಕ್ಷಗಳು ಮೋದಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿವೆ. ಜಿಲ್ಲೆಯ ಅಭಿವೃದ್ಧಿಯಲ್ಲಿ ಮೋದಿಯವರ ಪಾತ್ರ ಹೆಚ್ಚಾಗಿದ್ದು, ಮೋದಿಯವರ ಬಗ್ಗೆ ಮಾತನಾಡಲು ನಾವು ಹೆಮ್ಮೆ ಪಡುತ್ತೇವೆ. ನಮಗೆ ಮೊದಲು ದೇಶ, ಆನಂತರ ಪಕ್ಷ. ನಾವು-ನೀವು ಎಂಬ ಧ್ಯೇಯವನ್ನು ಇಟ್ಟುಕೊಂಡು ದೇಶದ ಬೆಳವಣಿಗೆಗೆ ಕಾರ್ಯ ನಿರ್ವಹಿಸುತ್ತಿದ್ದೇವೆ. ನೀರಿಗಾಗಿ ನಾನು ಹೋರಾಡುವುದು ಶತಸಿದ್ಧ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು

ನಂತರ ಮಾತನಾಡಿದ ತುಮಕೂರಿನ ಗ್ರಾಮಾಂತರ ಮಾಜಿ ಶಾಸಕ ಸುರೇಶ್ ಗೌಡ, ತುಮಕೂರು ಕ್ಷೇತ್ರ ಕುರುಕ್ಷೇತ್ರವಾಗಿ ಬದಲಾಗುತ್ತಿದೆ. ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು ಯಾವ ನೈತಿಕತೆಯ ಆಧಾರದ ಮೇಲೆ ತುಮಕೂರಿನಲ್ಲಿ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ? ಮಂಡ್ಯದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪ ಎನ್ನುವ ಹಾಗೆ ಕರ್ನಾಟಕದಲ್ಲಿ ರೈತರು ಮತ್ತು ಮತದಾರರು ಕುಮಾರಸ್ವಾಮಿ ಎಲ್ಲಿದ್ದೀಯಪ್ಪ ಎಂದು ಕೇಳುವ ಪರಿಸ್ಥಿತಿ ಉಂಟಾಗಿದೆ. ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದ ಮತದಾರರಿಗೆ ನೀಡಿದಂತಹ ಭರವಸೆಗಳು ಯಾವುದೂ ಸಹ ಈಡೇರದೆ ನನೆಗುದಿಗೆ ಬಿದ್ದಿವೆ. ತುಮಕೂರು ಜಿಲ್ಲೆಗೆ ನೀರಿನಲ್ಲಿ ಅನ್ಯಾಯವಾಗಿದೆ ಎಂದರೆ ಅದಕ್ಕೆ ದೇವೇಗೌಡ ಅವರ ಕುಟುಂಬವೇ ಕಾರಣ. ಕುಡಿಯುವ ನೀರು ಬೇಡ ಎಂದರೆ ದೇವೇಗೌಡರಿಗೆ ಮತನೀಡಿ. ಕುಡಿಯಲು ನೀರು ಬೇಕೆಂದರೆ ಬಿಜೆಪಿಯನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಸುರೇಶ್ ಗೌಡ ಮಾಡಿಕೊಂಡರು‌.

ಇದೇ ವೇಳೆ ಜೆಡಿಎಸ್ ಹಾಗೂ ಕಾಂಗ್ರೆಸ್ ತೊರೆದ ಅನೇಕ ಕಾರ್ಯಕರ್ತರು ವಿ.ಸೋಮಣ್ಣರ ಅಧ್ಯಕ್ಷತೆಯಲ್ಲಿ ಬಿಜೆಪಿ ಪಕ್ಷವನ್ನು ಸೇರಿದರು.

For All Latest Updates

ABOUT THE AUTHOR

...view details