ತುಮಕೂರು:ಕಾನೂನು ಖಾತೆ ಮಾತ್ರ ಕೊಟ್ಟಿದ್ದರೆ ನನ್ನ ಮನಸ್ಸಿಗೆ ನೋವಾಗುತಿತ್ತು. ಜೊತೆಗೆ ಸಣ್ಣ ನೀರಾವರಿ ಖಾತೆಯನ್ನೂ ಕೊಟ್ಟಿದ್ದು ಖುಷಿ ನೀಡಿದೆ. ಈ ಮೂಲಕ ಜಲಮೂಲಗಳನ್ನು ತುಂಬಿಸಲು ಉತ್ತಮ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿದೆ ಎಂದು ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ಮಂತ್ರಿ ಅಂದ್ರೇ ಒಂದ್ರೀತಿ ನಾಟಕದ ರಾಜನಿದ್ದಂತೆ, ಹೆಚ್ಚಿಗೆ ಬೆಲೆ ಕೊಡಬೇಡಿ.. ಸಚಿವ ಮಾಧುಸ್ವಾಮಿ - Law minister J.C.Madhuswamy
ಕಾನೂನು ಖಾತೆ ಜೊತೆಗೆ ಸಣ್ಣ ನೀರಾವರಿ ಖಾತೆಯೂ ಸಿಕ್ಕಿರುವುದು ಸಮಾಧಾನ ತಂದಿದೆ ಎಂದು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ.
drama king role is like that minister post
ಜಿಲ್ಲೆಯ ತುರುವೇಕೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವವನದಲ್ಲಿ ಎಂದೂ ಸಚಿವನಾಗಬೇಕೆಂದು ಅನಿಸಿರಲಿಲ್ಲ. ಈಗ ಸಚಿವ ಸ್ಥಾನ ಒಲಿದು ಬಂದಿದೆ. ಈ ಮಂತ್ರಿಗಿರಿ ಅನ್ನೋದು ನಾಟಕದಲ್ಲಿನ ರಾಜನ ಪಾತ್ರ ಇದ್ದಂತೆ, ನಾಟಕದಲ್ಲಿ ಮಹಾಪ್ರಭು ಎನ್ನುತ್ತಾರೆ. ಪಾತ್ರ ಮುಗಿದ ಬಳಿಕ ಆ ಪಾತ್ರದ ವ್ಯಕ್ತಿಗೆ ಬೆಲೆಯೇ ನೀಡುವುದಿಲ್ಲ. ಹಾಗಾಗಿ, ರಾಜನಪಾತ್ರಕ್ಕೆ ಹೆಚ್ಚಿಗೆ ಬೆಲೆ ಕೊಡಬೇಡಿ. ನಾವು ನಮ್ಮತನವನ್ನ ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.