ಕರ್ನಾಟಕ

karnataka

ETV Bharat / city

ಹಾಸನದಲ್ಲಿ ದೇವೇಗೌಡ-ಬೊಮ್ಮಾಯಿ ಹೊಂದಾಣಿಕೆಯ ಅನುಮಾನ ಪ್ರೀತಂಗೌಡಗೆ ಬಂದಿರಬಹುದು : ಡಾ. ಪರಮೇಶ್ವರ್ - ಹಾಸನ ಜಿಲ್ಲೆಯ ರಾಜಕಾರಣ

ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗುವುದು ಕೂಡ ಒಂದು ರೀತಿ ಸಂಪ್ರದಾಯ. ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಹುದ್ದೆ ಅಲಂಕರಿಸಿದ ವೇಳೆ ಯಾರಾದರೂ ಹಿರಿಯರು ಇದ್ದರೆ ಅವರು ಯಾವುದೇ ಪಕ್ಷದವರಾಗಿರಲಿ ಅವರನ್ನು ಭೇಟಿ ಮಾಡುವುದು ಒಂದು ರೀತಿಯ ಸಂಪ್ರದಾಯ ರೂಢಿಸಿಕೊಂಡು ಬರಲಾಗಿದೆ. ಅದಕ್ಕೆ ಬೇರೆ ರೀತಿಯ ಅರ್ಥ ಕಲ್ಪಿಸಬಾರದು, ಇಲ್ಲದಿದ್ದರೆ ನಾವು ಸಣ್ಣವರಾಗುತ್ತೇವೆ..

parameshwar
parameshwar

By

Published : Aug 11, 2021, 6:47 PM IST

ತುಮಕೂರು :ಸಾಮಾನ್ಯವಾಗಿ ಶಾಸಕ ಪುನಾಃ ಅದೇ ಕ್ಷೇತ್ರದಿಂದ ಚುನಾಯಿತರಾಗಿಬೇಕು ಎಂಬ ಹಂಬಲ ಹೊಂದಿರುತ್ತಾನೆ. ಆದರೆ ದೇವೇಗೌಡರು ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿಯಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಅನುಮಾನ ಹಾಸನ ಶಾಸಕ ಪ್ರೀತಮ್ ಗೌಡ ಅವರಿಗೆ ಬಂದಿರಬಹುದು ಎಂದು ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ದೇಶದ ಪ್ರಧಾನಿಯಾಗಿದ್ದವರು ಮಾಜಿ ಪ್ರಧಾನಿ ದೇವೇಗೌಡರು ಮಾತ್ರ. ಹೀಗಾಗಿ, ಅವರ ಹಿರಿತನ ಹಾಗೂ ಮಾರ್ಗದರ್ಶನ ಬೊಮ್ಮಾಯಿ ಅವರಿಗೆ ಅಗತ್ಯವಿದೆ.

ಅಲ್ಲದೇ ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗುವುದು ಕೂಡ ಒಂದು ರೀತಿ ಸಂಪ್ರದಾಯ. ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಹುದ್ದೆ ಅಲಂಕರಿಸಿದ ವೇಳೆ ಯಾರಾದರೂ ಹಿರಿಯರು ಇದ್ದರೆ ಅವರು ಯಾವುದೇ ಪಕ್ಷದವರಾಗಿರಲಿ ಅವರನ್ನು ಭೇಟಿ ಮಾಡುವುದು ಒಂದು ರೀತಿಯ ಸಂಪ್ರದಾಯ ರೂಢಿಸಿಕೊಂಡು ಬರಲಾಗಿದೆ. ಅದಕ್ಕೆ ಬೇರೆ ರೀತಿಯ ಅರ್ಥ ಕಲ್ಪಿಸಬಾರದು, ಇಲ್ಲದಿದ್ದರೆ ನಾವು ಸಣ್ಣವರಾಗುತ್ತೇವೆ ಎಂದರು.

ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಹೇಳಿಕೆ ನೀಡಿರುವುದು

ನಾನು ಉಪಮುಖ್ಯಮಂತ್ರಿಯಾದ ಸಂದರ್ಭದಲ್ಲಿಯೂ ದೇವೇಗೌಡರನ್ನ ಭೇಟಿಯಾಗಿದ್ದೇನೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೂ ಪ್ರತ್ಯೇಕವಾದ ವಿಚಾರಧಾರೆಗಳಿವೆ. ಆದರೆ, ವ್ಯಕ್ತಿಗಳ ನಡುವೆ ಇಲ್ಲ ಎಂದರು.

ಹಾಸನ ಜಿಲ್ಲೆಯ ರಾಜಕಾರಣವನ್ನು ಮನಸ್ಸಿನಲ್ಲಿರಿಸಿಕೊಂಡು ಶಾಸಕ ಪ್ರೀತಂಗೌಡ ಈ ರೀತಿಯ ಹೇಳಿಕೆಗಳನ್ನು ನೀಡಿರಬಹುದು. ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಕುರಿತಂತೆ, ಅಲ್ಲದೇ ಇನ್ನಷ್ಟು ಕಲಿಯಬೇಕು ಎಂಬ ಮಾತುಗಳನ್ನು ಶಾಸಕ ಪ್ರೀತಮ್ ಗೌಡ ಸ್ವೀಕರಿಸಬೇಕಿದೆ ಎಂದು ತಿಳಿಸಿದರು.

ಸಚಿವ ಈಶ್ವರಪ್ಪ ಸಹ ಕಾಂಗ್ರೆಸ್ ಕುರಿತಂತೆ ಅನೇಕ ಬಾರಿ ಅವಹೇಳನಕಾರಿಯಾದ ಮಾತುಗಳನ್ನು ಆಡಿದ್ದಾರೆ. ಅದನ್ನು ಸರಿಪಡಿಸಿಕೊಳ್ಳಬೇಕು. ಒಂದು ರಾಷ್ಟ್ರೀಯ ಪಕ್ಷದ ಮುಖಂಡರಾಗಿ ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ. ಪದೇಪದೆ ಹೇಳಿಕೆ ನೀಡುತ್ತಿದ್ದಾರೆ. ಇವರು ಸರಿಪಡಿಸಿಕೊಳ್ಳಲು ಈಗ ಸರಿಯಾದ ಸಮಯ ಎಂದರು.

ABOUT THE AUTHOR

...view details