ಕರ್ನಾಟಕ

karnataka

ETV Bharat / city

ಆಯುಷ್​ ಇಲಾಖೆ ವತಿಯಿಂದ ತುಮಕೂರು ಜಿಲ್ಲೆಗೆ 50,000 ಕಿಟ್​ ವಿತರಣೆ - ತುಮಕೂರು ಜಿಲ್ಲೆಗೆ 50,000 ಕಿಟ್​

ತುಮಕೂರು ಜಿಲ್ಲೆಯ 10 ತಾಲೂಕುಗಳಿಗೆ ಸಮನಾಗಿ 50,000 ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಔಷಧಿ​​ ಕಿಟ್​ಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಕಿಟ್​ನಲ್ಲಿ ಮೂರು ತರಹದ ಔಷಧಿಗಳು ಇರಲಿದ್ದು, ಮನುಷ್ಯನ ದೇಹದಲ್ಲಿ ಜ್ವರ, ಶೀತ, ಕೆಮ್ಮಿನಂತಹ ರೋಗಗಳನ್ನು ನಿವಾರಣೆ ಮಾಡಲಿದೆ.

Distribution of 50,000 Kits to Tumkur District by AYUSH Department
ಆಯುಷ್​ ಇಲಾಖೆ ವತಿಯಿಂದ ತುಮಕೂರು ಜಿಲ್ಲೆಗೆ 50,000 ಕಿಟ್​ಗಳ ವಿತರಣೆ

By

Published : Jul 20, 2020, 11:17 PM IST

ತುಮಕೂರು:ಕೊರೊನಾ ತಡೆಗಟ್ಟಲು ಸರ್ಕಾರ ನಾನಾ ರೀತಿಯ ಕಸರತ್ತು ನಡೆಸುತ್ತಿದೆ. ಈ ನಡುವೆ ಆಯುಷ್ ಇಲಾಖೆ ವತಿಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಔಷಧಿಗಳನ್ನು ವಿತರಣೆ ಮಾಡಲಾಗುತ್ತಿದೆ. ಈ ಯೋಜನೆಯಡಿ ತುಮಕೂರು ಜಿಲ್ಲೆಯಾದ್ಯಂತ 50,000 ಕಿಟ್​ಗಳನ್ನು ವಿತರಿಸಲಾಗುತ್ತಿದೆ.

ಆಯುಷ್​ ಇಲಾಖೆ ವತಿಯಿಂದ ತುಮಕೂರು ಜಿಲ್ಲೆಗೆ 50,000 ಕಿಟ್​ಗಳ ವಿತರಣೆ

ಕೊರೊನಾ ವಾರಿಯರ್ಸ್​ಗಳಿಗೆ, ಮಕ್ಕಳಿಗೆ, ವಯೋವೃದ್ಧರಿಗೆ, ಸೋಂಕಿತರ ಸಂಪರ್ಕ ಹೊಂದಿದವರಿಗೆ ಮತ್ತು ಅಗತ್ಯ ಎನಿಸಿದವರಿಗೆ ರೋಗ ನಿರೋಧಕ ಔಷಧಿಯ ಕಿಟ್​ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಜಿಲ್ಲೆಯ 10 ತಾಲೂಕುಗಳಿಗೆ ಸಮನಾಗಿ ಆಯುಷ್​​ ಕಿಟ್​ಗಳನ್ನು ವಿತರಣೆ ಮಾಡಲಾಗಿದೆ. ಕಿಟ್​ನಲ್ಲಿ ಮೂರು ತರಹದ ಔಷಧಿಗಳು ಇರಲಿವೆ. ಅದರಲ್ಲಿ ಹೋಮಿಯೋಪತಿ ಔಷಧಿಯಾದ ಆರ್ಸನಿಕ್ ಆಲ್ಬಂ ಎಂಬ 10 ಮಾತ್ರೆಗಳಿರುತ್ತವೆ. ಅಮೃತಬಳ್ಳಿಯ ಔಷಧೀಯ ಗುಣವುಳ್ಳ ಸಂಶಮಣಿ ವಟಿ ಎಂಬ ಮಾತ್ರೆಗಳು ಕೂಡ ಇರಲಿವೆ. ಇದು ಮನುಷ್ಯನ ದೇಹದಲ್ಲಿ ಜ್ವರ, ಶೀತ, ಕೆಮ್ಮಿನಂತಹ ರೋಗಗಳನ್ನು ನಿವಾರಣೆ ಮಾಡಲಿದೆ.

ಇದರಲ್ಲಿ ಅರ್ಕ ಅಜೀಬ್ ಎಂಬ ದ್ರಾವಣವಿದ್ದು, ಇದನ್ನು ಕರ್ಚಿಫ್ ಮತ್ತು ಮಾಸ್ಕ್ ಗಳಿಗೆ ದಿನಕ್ಕೆ ಒಮ್ಮೆ ಸಿಂಪಡಣೆ ಮಾಡಿ ಬಳಸಿಕೊಳ್ಳಬಹುದಾಗಿದೆ. ಇದರಿಂದ ವೈರಸ್​ಗಳು ನೇರವಾಗಿ ಬಾಯಿ ಹಾಗೂ ಮೂಗಿನ ಮೂಲಕ ಮನುಷ್ಯನ ದೇಹವನ್ನು ಸೇರುವುದನ್ನು ತಡೆಗಟ್ಟಬಹುದಾಗಿದೆ ಎಂದು ಆಯುಷ್ ಇಲಾಖೆಯ ವೈದ್ಯ ಡಾ. ಸಂಜೀವ ಮೂರ್ತಿ ತಿಳಿಸಿದ್ದಾರೆ.

ABOUT THE AUTHOR

...view details