ಕರ್ನಾಟಕ

karnataka

ETV Bharat / city

ಸೃಷ್ಟಿಯ ವಿಸ್ಮಯ : ಪಾವಗಡದಲ್ಲಿ ಎರಡು ತಲೆಯುಳ್ಳ ಕರುವಿಗೆ ಜನ್ಮ ನೀಡಿದ ಹಸು.. - ರಡು ತಲೆಯುಳ್ಳ ಕರುವಿಗೆ ಜನನ

ಇದನ್ನು ನೋಡಲು ಜನರು ಮುಗಿಬಿದ್ದರು. ಸದ್ಯ ಹಸು ಆರೋಗ್ಯವಾಗಿದೆ. ಆದರೆ, ಚೊಚ್ಚಲ ಕರು ಮಾತ್ರ ಸಾವನ್ನಪ್ಪಿದೆ..

cow-gave-birth-to-a-two-headed-calf
ಎರಡು ತಲೆಯುಳ್ಳ ಕರು ಜನನ

By

Published : Jun 19, 2021, 7:38 PM IST

ತುಮಕೂರು :ಪಾವಗಡದಲ್ಲಿ ಎರಡು ತಲೆ, ಎರಡು ಬಾಯಿ, ನಾಲ್ಕು ಕಣ್ಣು, ನಾಲ್ಕು ಕಿವಿ ಹೊಂದಿರುವ ಕರುವಿಗೆ ಹಸುವೊಂದು ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ. ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದುರಾದೃಷ್ಟವಶಾತ್ ಜಗತ್ತಿನ ಬೆಳಕು ಕಂಡ ಐದೇ ನಿಮಿಷಕ್ಕೆ ಕರು ಸಾವನ್ನಪ್ಪಿದೆ.

ಗ್ರಾಮದ ರೈತ ಅಶ್ವತಪ್ಪ ಎಂಬುವರ ಮನೆಯಲ್ಲಿ ಸಾಕಿದ್ದ ಜರ್ಸಿ ಹಸುವೊಂದು ಎರಡು ತಲೆ, ನಾಲ್ಕು ಕಣ್ಣು, ಎರಡು ನಾಲಿಗೆ ಇರುವ ವಿಚಿತ್ರ ಗಂಡು ಕರುವಿಗೆ ಜನ್ಮ ನೀಡಿತ್ತು. ಇದನ್ನು ನೋಡಲು ಜನರು ಮುಗಿಬಿದ್ದರು. ಸದ್ಯ ಹಸು ಆರೋಗ್ಯವಾಗಿದೆ. ಆದರೆ, ಚೊಚ್ಚಲ ಕರು ಮಾತ್ರ ಸಾವನ್ನಪ್ಪಿದೆ.

ABOUT THE AUTHOR

...view details