ತುಮಕೂರು: ಕರ್ನಾಟಕದಲ್ಲಿ ಕೊರೊನಾ ವೈರಸ್ಗೆ ಮತ್ತೋರ್ವ ಸೋಂಕಿತ ವ್ಯಕ್ತಿ ಸಾವನ್ನಪ್ಪಿರುವುದು ದೃಢಪಟ್ಟಿದೆ.
BREAKING ಕರ್ನಾಟಕದಲ್ಲಿ ಕೊರೊನಾಗೆ ಮತ್ತೋರ್ವ ಬಲಿ: ಸಾವಿನ ಸಂಖ್ಯೆ 3ಕ್ಕೆ ಏರಿಕೆ - Karnataka coronavirus infected death news
ಕರ್ನಾಟಕದಲ್ಲಿ ಕೊರೊನಾ ವೈರಸ್ಗೆ ಮತ್ತೋರ್ವ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದ್ದಾರೆ.
60 ವರ್ಷದ ಶಿರಾ ಮೂಲದ ವೃದ್ಧ ಸಾವನ್ನಪ್ಪಿದ್ದು, ಇವರು 13 ಮಂದಿಯ ಜೊತೆ ಪ್ರಯಾಣಿಸಿದ್ದರು ಎಂದು ತಿಳಿದುಬಂದಿದೆ. ಈ ವ್ಯಕ್ತಿಯೊಂದಿಗೆ ಪ್ರಯಾಣಿಸಿದ್ದ ಸಹ ಪ್ರಯಾಣಿಕರನ್ನು ಈಗಾಗಲೇ ಪತ್ತೆ ಹಚ್ಚಲಾಗುತ್ತಿದೆ. ಸೋಂಕಿತ ವೃದ್ಧ ಮಾರ್ಚ್ 24 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ತುಮಕೂರಿನಿಂದ ದೆಹಲಿಗೆ ರೈಲಿನ ಮೂಲಕ ಪ್ರಯಾಣಿಸಿರುವುದು ಗೊತ್ತಾಗಿದೆ. ದೆಹಲಿಯ ಜಮಿಯಾ ಮಸೀದಿ ಕಾರ್ಯಕ್ರಮದಲ್ಲಿ ಇವರು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಈವರೆಗೆ ರಾಜ್ಯದಲ್ಲಿ 55 ಮಂದಿ ಸೋಂಕಿತರು ಪತ್ತೆಯಾಗಿದ್ದು, 3 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ಕಲಬುರಗಿ 1, ಗೌರಿಬಿದನೂರು 1, ತುಮಕೂರಿನಲ್ಲಿ ಇದೀಗ ಮತ್ತೊಬ್ಬರು ಸಾವನ್ನಪ್ಪಿದ್ದಾರೆ.