ತುಮಕೂರು:ಜಿಲ್ಲೆಯಲ್ಲಿಂದು 29 ಮಂದಿ ಕೆಎಸ್ಆರ್ಪಿ ಸಿಬ್ಬಂದಿ ಸೇರಿ 95 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 428ಕ್ಕೆ ಏರಿಕೆಯಾಗಿದೆ.
ತುಮಕೂರು ಜಿಲ್ಲೆಯಲ್ಲಿಂದು 95 ಮಂದಿಗೆ ಕೊರೊನಾ: ಇಬ್ಬರು ಸಾವು - Tumkur Corona Case
ತುಮಕೂರು ಜಿಲ್ಲೆಯಲ್ಲಿಂದು 29 ಮಂದಿ ಕೆಎಸ್ಆರ್ಪಿ ಸಿಬ್ಬಂದಿ ಸೇರಿ 95 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಸೋಂಕಿತರು ಬಲಿಯಾಗಿದ್ದಾರೆ.
ತುಮಕೂರು ಜಿಲ್ಲೆಯಲ್ಲಿಂದು 95 ಮಂದಿಗೆ ಕೊರೊನಾ..ಇಬ್ಬರು ಸಾವು
ಅಲ್ಲದೆ ಇಂದು ಕೊರೊನಾಗೆ ಇಬ್ಬರು ಸೋಂಕಿತರು ಬಲಿಯಾಗಿದ್ದಾರೆ. ತುಮಕೂರು ತಾಲೂಕು ಒಂದರಲ್ಲೇ ಇಂದು 69 ಮಂದಿಗೆ ಸೋಂಕು ತಗುಲಿದೆ. ಸಿರಾದಲ್ಲಿ 17 ಮಂದಿ, ಪಾವಗಡದಲ್ಲಿ ನಾಲ್ವರಿಗೆ ಸೋಂಕು ದೃಢಪಟ್ಟಿದೆ.
ಒಟ್ಟು 330 ಮಂದಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 13 ಮಂದಿ ಮೃತಪಟ್ಟಿದ್ದಾರೆ. 5 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.