ತುಮಕೂರು :ಕೊರೊನಾದ ಮೂರನೇ ಅಲೆ ವ್ಯಾಪಿಸೋ ಆತಂಕವಿಲ್ಲ, ಎಚ್ಚರಿಕೆಯಿಂದ ಇರಬೇಕು. ಕೋವಿಡ್ ಭಯ ದೇಶದಲ್ಲಿ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಕೊರೊನಾ ಕುರಿತು ಎಚ್ಚರಿಕೆ ಅಗತ್ಯ ಅಂತಾ ಹೇಳಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್.. ನಗರದಲ್ಲಿ ಮಾತನಾಡಿದ ಸಚಿವರು, ವಿದೇಶದಲ್ಲಿ ಗಂಭೀರ ಸ್ಥಿತಿ ದೂರವಾಗಿ ಸಾಕಷ್ಟು ದಿನಗಳೇ ಕಳೆದಿದೆ. ನಮ್ಮ ದೇಶದಲ್ಲಿಯೂ ಭಯವಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಂತದಲ್ಲಿ ಎನ್‌ಇಪಿ ಅನುಷ್ಠಾನಗೊಳಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಹೊಸ ಪ್ರಯತ್ನ ಮಾಡಿದೆವು. ನಮ್ಮ ಶಕ್ತಿಗಿಂತ ಒಳ್ಳೆಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆವು. ಸೋಲಿಗೆ ಗೆಲುವಿಗೆ ನೂರೆಂಟು ನಾಯಕರು ಎಂದು ವಿಶ್ಲೇಷಿಸಿದರು. ತುಮಕೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿ ಬಿ.ಸಿ.ನಾಗೇಶ್ ಭಾಗವಹಿಸಿದ್ದರು.
ಇದೇ ವೇಳೆ ಎಂಇಎಸ್ ಪುಂಡಾಟಿಕೆ ಬಗ್ಗೆ ಮಾತನಾಡಿದ ಸಚಿವರು, ಸಮಾಜವನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುವಂತ ಜನ ಅವತ್ತಿನಿಂದ ಇವತ್ತಿನವರೆಗೂ ಎರಡೂ ಕಡೆ ಇದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ ಪ್ರಾಣ ಕೊಟ್ಟವರು, ರಾಷ್ಟ್ರವನ್ನು ಉಳಿಸುವಂತ ಪ್ರಯತ್ನ ಮಾಡಿದವರ ಪ್ರತಿಮೆಗೆ ಹೀಗೆ ಮಾಡಿದ್ದಾರೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತೆ ಎಂದರು.
ಇದನ್ನೂ ಓದಿ:ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸ್ವಾವಲಂಬಿ ಭಾರತದ ಗುರಿ: ಸಚಿವ ಬಿ.ಸಿ ನಾಗೇಶ್