ಕರ್ನಾಟಕ

karnataka

ETV Bharat / city

ತುಮಕೂರಿನಲ್ಲಿ ನಿತ್ಯ 4,500 ಮಂದಿಗೆ ಕೊರೊನಾ ಪರೀಕ್ಷೆ - ತುಮಕೂರು ಕೊರೊನಾ ಲಸಿಕೆ

ತುಮಕೂರು ಜಿಲ್ಲೆಯಲ್ಲಿ ತಾಲೂಕು ಕೇಂದ್ರದಲ್ಲಿ ಪ್ರತಿ ಮನೆಮನೆಗೆ ತೆರಳಿ ವ್ಯಾಕ್ಸಿನ್ (Corona Vaccine) ನೀಡುವ ಕಾರ್ಯ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ನಿತ್ಯ 4,500 ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದರು.

ತುಮಕೂರಿನಲ್ಲಿ ನಿತ್ಯ 4,500 ಮಂದಿಗೆ ಕೊರೊನಾ ಪರೀಕ್ಷೆ
ತುಮಕೂರಿನಲ್ಲಿ ನಿತ್ಯ 4,500 ಮಂದಿಗೆ ಕೊರೊನಾ ಪರೀಕ್ಷೆ

By

Published : Nov 10, 2021, 8:27 PM IST

ತುಮಕೂರು:ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ನಿತ್ಯ 4,500 ಮಂದಿಗೆ ಪರೀಕ್ಷೆ (Covid Test) ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಶೇ 0.5 ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್(Corona Positivity Rate) ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದರು.

ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, 19,90,000 ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. 16 ಲಕ್ಷ ಮಂದಿಗೆ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಮಾಡಲಾಗಿದೆ. ಶೇ.85ರಷ್ಟು ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು.

ತಾಲೂಕು ಕೇಂದ್ರದಲ್ಲಿ ಪ್ರತಿ ಮನೆಮನೆಗೆ ತೆರಳಿ ವ್ಯಾಕ್ಸಿನ್ (Corona Vaccine) ನೀಡುವ ಕಾರ್ಯ ಮಾಡಲಾಗುತ್ತಿದೆ. ಆದರೆ ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ಕೆಲಸ ಅರಸಿ ಹೋಗಿದ್ದಾರೆ. ಅಲ್ಲಿ ಅವರು ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆಯೇ ಎಂಬ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದರು.

ಶೇ.85ರಷ್ಟು ಮೊದಲ ಡೋಸ್ ನೀಡಲಾಗಿದೆ, ಶೇ.45ರಷ್ಟು ಎರಡನೇ ಡೋಸ್ ನೀಡಲಾಗಿದೆ. ಉಳಿದಿರುವರಿಗೆ ಎರಡನೇ ಡೋಸ್ ತೆಗೆದುಕೊಲ್ಳುವಂತೆ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ಚಾಕುವಿನಿಂದ ಇರಿದು ಅಪಾರ್ಟ್​ಮೆಂಟ್​ ನಿವಾಸಿಯನ್ನೇ ಹತ್ಯೆಗೈದ ಸೆಕ್ಯೂರಿಟಿ ಗಾರ್ಡ್

ABOUT THE AUTHOR

...view details