ತುಮಕೂರು :ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಜನರನ್ನು ತುಂಬಿಕೊಂಡು ಪ್ರಯಾಣಿಸಿರುವ ವಿಡಿಯೋ ವೈರಲ್ ಆಗಿದೆ. ಶೇ.50ರಷ್ಟು ಪ್ರಯಾಣಿಕರು ಮಾತ್ರ ಇರಬೇಕು ಅನ್ನೋ ನಿಯಮವನ್ನು ಗಾಳಿಗೆ ತೂರಿ ಬಸ್ ತುಂಬಾ ಪ್ರಯಾಣಿಕರನ್ನು ತುಂಬಿಕೊಂಡು ಹೋಗಲಾಗ್ತಿದೆ.
ಇಲ್ಲ ಕೊರೊನಾ ಭಯ, ಬಸ್ನಲ್ಲಿ ತುಂಬಿ ತುಳುಕುತ್ತಿರುವ ಪ್ರಯಾಣಿಕರು - Tumkur District News
ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಕೆಎಸ್ಆರ್ಟಿಸಿ ಬಸ್ ತುಂಬಾ ಜನರನ್ನು ತುಂಬಿಕೊಂಡು ಪ್ರಯಾಣಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ..
ತುಂಬಿ ತುಳುಕುತ್ತಿರುವ ಬಸ್
ಚಿಕ್ಕನಾಯಕನಹಳ್ಳಿ-ತುಮಕೂರು ಮಾರ್ಗವಾಗಿ ಸಂಚರಿಸಿದ KA-06-F1001 ಸಂಖ್ಯೆ ಬಸ್ ಇದಾಗಿದೆ. ಸಾಮಾಜಿಕ ಅಂತರವನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿದೆ. ಚಾಲಕ, ನಿರ್ವಾಹಕನ ಎಡವಟ್ಟಿಗೆ ಸೋಂಕು ಹರಡುವ ಭೀತಿ ಎದುರಾಗಿದೆ.