ತುಮಕೂರು: ಕೊರೊನಾ ಭೀತಿ ಹಿನ್ನೆಲೆ ಇಂದು ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನ ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷೆಗೊಳಪಡಿಸಲಾಯಿತು.
ಕೊರೊನಾ ಭೀತಿ: ಸಿದ್ಧಗಂಗಾ ಮಠದಲ್ಲಿ ಡಿಕೆಶಿಗೆ ಥರ್ಮಲ್ ಸ್ಕ್ಯಾನಿಂಗ್ - ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಈಗ ಎಲ್ಲ ಕಡೆ ಕೂಡಾ ಕೊರೊನಾ ಭೀತಿ ಇರುವ ಕಾರಣ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಹೆಚ್ಚಿನ ಜನರು ಸೇರುವ ಕಡೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತಿದೆ.
![ಕೊರೊನಾ ಭೀತಿ: ಸಿದ್ಧಗಂಗಾ ಮಠದಲ್ಲಿ ಡಿಕೆಶಿಗೆ ಥರ್ಮಲ್ ಸ್ಕ್ಯಾನಿಂಗ್ corona effect: Thermal Scanning to dk shivkumar in Siddhagangamatha](https://etvbharatimages.akamaized.net/etvbharat/prod-images/768-512-6469426-thumbnail-3x2-sow.jpg)
ಕೊರೊನ ಭೀತಿ: ಸಿದ್ದಗಂಗಾಮಠದಲ್ಲಿ ಡಿಕೆಶಿಗೆ ಥರ್ಮಲ್ ಸ್ಕ್ಯಾನಿಂಗ್
ಸಿದ್ದಗಂಗಾ ಮಠದಲ್ಲಿ ಡಿಕೆಶಿಗೆ ಥರ್ಮಲ್ ಸ್ಕ್ಯಾನಿಂಗ್
ಈಗಾಗಲೇ ಸಿದ್ಧಗಂಗಾ ಮಠದಲ್ಲಿ ಭಕ್ತರು ಹಾಗೂ ವಿದ್ಯಾರ್ಥಿಗಳನ್ನ ಥರ್ಮಲ್ ಸ್ಕ್ಯಾನರ್ ಮೂಲಕ ವೈದ್ಯಕೀಯ ಸಿಬ್ಬಂದಿ ಪರೀಕ್ಷಿಸುತ್ತಿದ್ದಾರೆ. ಅದೇ ರೀತಿ, ಇಂದು ಮಠಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನೂ ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷೆಗೊಳಪಡಿಸಲಾಯಿತು.
ಬೆಂಬಲಿಗರು ಹಾಗೂ ಕಾಂಗ್ರೆಸ್ ಮುಖಂಡರ ನೂಕುನುಗ್ಗಲಿನ ನಡುವೆಯೂ ಡಿ.ಕೆ.ಶಿವಕುಮಾರ್ ವೈದ್ಯಕೀಯ ಸಿಬ್ಬಂದಿಗೆ ಸ್ಕ್ಯಾನಿಂಗ್ ಮಾಡಲು ಸಹಕರಿಸಿದರು.
Last Updated : Mar 19, 2020, 9:42 PM IST