ತುಮಕೂರು:ಕೊರೊನಾ ಸೋಂಕು ಭೀತಿ ನಡುವೆಯೂ ಶಿರಾ ವಿಧಾನಸಭೆ ಉಪಚುನಾವಣೆಯಲ್ಲಿ, ಪಕ್ಷಗಳು ಸಾಮಾಜಿಕ ಅಂತರ ಮರೆತು ಅಬ್ಬರದ ಪ್ರಚಾರ ನಡೆಸುತ್ತಿವೆ. ಇನ್ನೊಂದೆಡೆ ಸೋಂಕಿನ ಭೀತಿಯಿಂದ ಕಂಗೆಟ್ಟಿರುವ ಕ್ಷೇತ್ರದ ಮತದಾರರು ಮನೆಯಲ್ಲೇ ಮತ ಚಲಾಯಿಸಲು ಅವಕಾಶ ಕೊಡಿ ಎಂದು ಅರ್ಜಿ ಸಲ್ಲಿಸಿದ್ದಾರೆ.
ಇಆರ್ಎಂಎಸ್ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಿರುವರಲ್ಲಿ 80 ವರ್ಷ ಮೇಲ್ಪಟ್ಟವರು, ಅಂಗವಿಕಲರು, ಕೊರೊನಾ ಸೋಂಕಿತರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮನೆಗಳಲ್ಲಿಯೇ ಮತಚಲಾಯಿಸಲು ಅವಕಾಶ ನೀಡುವಂತೆ ಕೋರಿರುವರಲ್ಲಿ 80 ವರ್ಷ ಮೇಲ್ಪಟ್ಟ 2790 ಜನ, 2093 ಮಂದಿ ಅಂಗವಿಕಲರು, ಇನ್ನು 136 ಮಂದಿ ಕೊರೊನಾ ಸೋಂಕಿತರು ಸೇರಿದ್ದಾರೆ. ಇವರಲ್ಲಿ ಇದುವರೆಗೂ 3036 ಮಂದಿಗೆ ಮತ ಚಲಾಯಿಸಲು ಒಪ್ಪಿಗೆ ನೀಡಿದ್ದು, ಅದರಲ್ಲಿ 80 ವರ್ಷ ಮೇಲ್ಪಟ್ಟ 1666 ಹಿರಿಯ ನಾಗರೀಕರು, 1330 ಅಂಗವಿಕಲರು, 40 ಮಂದಿ ಕೊರೊನಾ ಸೋಂಕಿತರು ಇದ್ದಾರೆ.