ತುಮಕೂರು: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೆಲ ನಿರ್ಬಂಧಗಳನ್ನು ವಿಧಿಸಿದ್ದು, ಪಾವಗಡ ಪಟ್ಟಣದ ಶ್ರೀ ಶನಿ ಮಹಾತ್ಮ ದೇವಾಲಯದ ಆಡಳಿತ ಮಂಡಳಿ ಮಾತ್ರ ಯಾವುದನ್ನೂ ಲೆಕ್ಕಿಸದೆ ವಿದೇಶಿಗರನ್ನು ಪ್ರತಿನಿತ್ಯ ಸ್ವಾಗತಿಸುತ್ತಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪಾವಗಡ ಶನಿ ಮಹಾತ್ಮ ದೇಗುಲ ಆಡಳಿತ ಮಂಡಳಿ ವಿರುದ್ಧ ಸ್ಥಳೀಯರ ಆಕ್ರೋಶ - ಪಾವಗಡ ಪಟ್ಟಣದ ಶ್ರೀ ಶನಿ ಮಹಾತ್ಮ ದೇವಾಲಯದ ಆಡಳಿತ ಮಂಡಳಿ
ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೆಲ ನಿರ್ಬಂಧಗಳನ್ನು ವಿಧಿಸಿದ್ದು, ಪಾವಗಡ ಪಟ್ಟಣದ ಶ್ರೀ ಶನಿ ಮಹಾತ್ಮ ದೇವಾಲಯದ ಆಡಳಿತ ಮಂಡಳಿ ಮಾತ್ರ ಯಾವುದನ್ನೂ ಲೆಕ್ಕಿಸದೆ ವಿದೇಶಿಗರನ್ನು ಪ್ರತಿನಿತ್ಯ ಸ್ವಾಗತಿಸುತ್ತಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಶನಿ ಮಹಾತ್ಮ ದೇವಾಲಯಕ್ಕೆ ವಿದೇಶಿಗರು ಭೇಟಿ
ಕೊರೊನಾ ವೈರಸ್ ನಿಯಂತ್ರಣಕ್ಕೆ ನಾಳೆ ಜನತಾ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ನಡುವೆಯೇ ಬೃಹತ್ ಶಕ್ತಿ ಸೌಧ ಸೌರ ವಿದ್ಯುತ್ ಘಟಕ ವೀಕ್ಷಣೆಗೆ ಬರುತ್ತಿರುವ ಪ್ರವಾಸಿಗರು ಸಮೀಪದ ಶಿರಡಿ ಸಾಯಿ ಬಾಬಾ ಸನ್ನಿಧಾನಕ್ಕೂ ಭೇಟಿ ನೀಡುತ್ತಿದ್ದಾರೆ. ಕೊರೊನಾ ವೈರಸ್ ಸಮಸ್ಯೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಈ ಶನಿ ಮಹಾತ್ಮ ದೇವಾಲಯದ ಆಡಳಿತ ಮಂಡಳಿಯ ಕಾರ್ಯ ಜನತೆಯ ನಿದ್ದೆ ಕೆಡಿಸಿದೆ. ಸಂಬಂಧಪಟ್ಟವರು ವಿದೇಶಿಗರಿಗೆ ನಿಯಂತ್ರಣ ಹೇರಿ, ಕೊರೊನಾ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.