ತುಮಕೂರು: ರಾಶಿರಾಶಿ ಕಾಂಡೋಮ್ಗಳನ್ನು ಎಸೆದು ಹೋಗಿರುವ ಘಟನೆ ತುಮಕೂರು ನಗರದ ಹೊರವಲಯದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಇದನ್ನು ಕಂಡು ವಾಹನ ಸವಾರರು ಅಚ್ಚರಿಗೆ ಒಳಗಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬರುವ ಕ್ಯಾತ್ಸಂದ್ರದಿಂದ ಬಟವಾಡಿ ಬಳಿಯ ಶ್ರೀರಾಜ್ ಚಿತ್ರಮಂದಿರದ ಎದುರು ಇರುವ ಫ್ಲೈಓವರ್ ಮೇಲೆ ಕಿಲೋಮೀಟರ್ಗಟ್ಟಲೆ ಕಾಂಡೋಮ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇವುಗಳನ್ನು ಇಲ್ಲಿ ಎಸೆದವರು ಯಾರು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ.