ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ತೆರೆದ ಕುಪ್ಪೆ ಗ್ರಾಮ ಪಂಚಾಯತ್ನ ಪಿಡಿಒ ಸುದರ್ಶನ್ ಅವರು ಮನೆಗೆ ಬರುತ್ತಿಲ್ಲ ಎಂದು ಅವರ ಹೆಂಡತಿಯೇ ದೂರು ನೀಡಿದ್ದಾಳೆ.
ತುಮಕೂರಿನ ವಿವಾಹ ನೋಂದಣಿ ಕಚೇರಿಯಲ್ಲಿ ನನ್ನನ್ನು ಮದುವೆಯಾಗಿ, ಗರ್ಭಿಣಿ ಆದ ನಂತರ ಸುದರ್ಶನ್ ಮನೆಗೆ ಬರುತ್ತಿಲ್ಲ ಎಂದು ಟಿ. ನರಸೀಪುರ ತಾಲೂಕಿನ ಮಹಿಳೆ ಕುಣಿಗಲ್ ಪೊಲೀಸ್ ಠಾಣೆ ದೂರು ದಾಖಲಿಸಿದ್ದಾಳೆ.
2011ರಲ್ಲಿ ದೇವರಾಯನದುರ್ಗ ಬೆಟ್ಟದಲ್ಲಿ ನನ್ನ ವಿವಾಹವಾಗಿತ್ತು. 2016ರಲ್ಲಿ ಸಬ್ ರಿಜಿಸ್ಟ್ಆರ್ ಕಚೇರಿಯಲ್ಲಿ ಮದುವೆಯಾಗಿರುವ ವಿಷಯ ಸುದರ್ಶನ್ ಕುಟುಂಬಕ್ಕೆ ತಿಳಿಯಿತು. ಇದಕ್ಕೆ ಗಂಡನ ತಾಯಿ ಮತ್ತು ಸಹೋದರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪತಿ ಹತ್ತು ದಿನಗಳಿಂದ ಮನೆಗೆ ಬಾರದೆ ಮಾನಸಿಕ ಹಿಂಸೆ ನೀಡುತ್ತಿದ್ದಾನೆ. ಗರ್ಭಿಣಿಯಾದಾಗಿನಿಂದಲೂ ಮಗು ಬೇಡವೆಂದು ಗಲಾಟೆ ಮಾಡಿ ಹಲ್ಲೆ ಮಾಡುತ್ತಿದ್ದ ಎಂದು ಮಹಿಳೆ ಸುದರ್ಶನ್, ಅತ್ತೆ, ನಾದಿನಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಇದನ್ನೂ ಓದಿ:ರಸ್ತೆ ಅಪಘಾತ: ಮೇಡಾರಂ ಜಾತ್ರೆಗೆ ತೆರಳುತ್ತಿದ್ದ ಐವರು ಭಕ್ತರ ದುರ್ಮರಣ