ಕರ್ನಾಟಕ

karnataka

ETV Bharat / city

21ನೇ ಶತಮಾನದಲ್ಲಿ ಜ್ಞಾನಕ್ಕೆ ಮಾತ್ರ ಮಹತ್ವವಿದೆ: ಸಿಎಂ ಬೊಮ್ಮಾಯಿ - ತುಮಕೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತು

ತುಮಕೂರಿನಲ್ಲಿ ನಡೆದ ಕಲಿಕಾ ಚೇತರಿಕೆ‌ ಕಾರ್ಯಕ್ರಮ‌ದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಜ್ಞಾನ, ವಿದ್ಯೆಯ ಮಹತ್ವದ ಬಗ್ಗೆ ಮಾತನಾಡಿದ್ದಾರೆ. 21 ನೇ ಶತಮಾನ ಜ್ಞಾನದ ಶತಮಾನ ಎಂದು ಬಣ್ಣಿಸಿದ್ದಾರೆ.

cm-basavaraj-bommai
ಸಿಎಂ ಬೊಮ್ಮಾಯಿ

By

Published : May 16, 2022, 9:36 PM IST

Updated : May 16, 2022, 9:44 PM IST

ತುಮಕೂರು:21 ನೇ ಶತಮಾನದಲ್ಲಿ ಕೇವಲ ದುಡ್ಡು ಇದ್ದರೆ ಸಾಲದು, ಜ್ಞಾನವೂ ಇರಬೇಕು. ವಿದೇಶದ ಪ್ರಧಾನಿಗಳು, ಅಧಿಕಾರಿಗಳು ನಮ್ಮ ದೇಶಕ್ಕೆ ಭೇಟಿ ನೀಡಿದರೆ, ಅವರೀಗ ದೆಹಲಿಗೋ, ವಿಧಾನಸೌಧಕ್ಕೋ ಬರುವುದಿಲ್ಲ. ಇನ್ಫೋಸಿಸ್​, ವಿಪ್ರೋದಂತಹ ತಂತ್ರಜ್ಞಾನದ ಕ್ಯಾಂಪಸ್​ಗಳಿಗೆ ಹೋಗುತ್ತಾರೆ. ಇದು ಜ್ಞಾನಕ್ಕಿರುವ ಶಕ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ತುಮಕೂರಿನಲ್ಲಿ ನಡೆದ ಕಲಿಕಾ ಚೇತರಿಕೆ‌ ಕಾರ್ಯಕ್ರಮ‌ವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದೇಶದಲ್ಲಿ ಗುಣಾಕಾರ, ಭಾಗಾಕಾರ ಕಲಿಯೋದು 6ನೇ ತರಗತಿಗೆ. ಆದರೆ, ನಮ್ಮಲ್ಲಿ 2ನೇ ವರ್ಷದಲ್ಲಿಯೇ ಇದನ್ನೆಲ್ಲಾ ಕಲಿಸುತ್ತಾರೆ. ನಾವು ಎಷ್ಟು ಪ್ರಮಾಣದಲ್ಲಿ ಸ್ಕಿಲ್​ ಪಡೆದುಕೊಂಡಿದ್ದೇವೆ ಅನ್ನೋದರ ಮೇಲೆ ದೇಶದ ಭವಿಷ್ಯ ನಿಂತಿರುತ್ತದೆ. ಇಡೀ ಜಗತ್ತನ್ನು ಗೆಲ್ಲುವ ಶಕ್ತಿ ಮಕ್ಕಳಿಗೆ ಇದೆ. ಶಿಕ್ಷಣದಲ್ಲಿ ಬದಲಾವಣೆ ತರಲು ಹೊಸ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ ಎಂದು ಹೇಳಿದರು.

21ನೇ ಶತಮಾನದಲ್ಲಿ ಜ್ಞಾನಕ್ಕೆ ಮಾತ್ರ ಮಹತ್ವವಿದೆ: ಸಿಎಂ ಬೊಮ್ಮಾಯಿ

ಮಕ್ಕಳಲ್ಲಿ ಅತ್ಯಂತ ಸೂಕ್ಷ್ಮವಾದ ವಿಚಾರಗಳಿರುತ್ತವೆ.‌ ಮಕ್ಕಳಿಗೆ ಮುಗ್ಧತೆ ಇರುತ್ತೆ. ಮಕ್ಕಳಲ್ಲಿ ಕುತೂಹಲ ಇರುತ್ತದೆ. ಕುತೂಹಲ, ಮುಗ್ಧತೆ ಎರಡು ಒಂದೇ ಸಂದರ್ಭದಲ್ಲಿ ಇರುವುದು ಮಕ್ಕಳಲ್ಲಿ ಮಾತ್ರ. ಮಕ್ಕಳ ಹಂತಕ್ಕೆ ಹೋಗಿ ಅವರ ವಿಚಾರ, ಮನಸ್ಥಿತಿಗೆ ತಕ್ಕಂತೆ ಶಿಕ್ಷಣ ನೀಡಬೇಕು. ಪ್ರಶ್ನೆ ಕೇಳುವ ಹಕ್ಕು ಶಿಕ್ಷಕರಿಗೆ ಮಾತ್ರ ಇರಲ್ಲ. ತಾರ್ಕಿಕವಾಗಿ ಜ್ಞಾನ ಬೆಳೆಸಿಕೊಳ್ಳಿ, ಬಾಯಿ ಪಾಠ ಮಾಡಬೇಡ ಎಂದು ಸಿಎಂ ಸಲಹೆ ನೀಡಿದರು.

ನಿಮಗೆ ಗೊತ್ತಿರುವುದನ್ನು ಇನ್ನೊಬ್ಬರಿಗೆ ಹೇಳಿಕೊಡಬೇಕು. ಆಗ ನೀವು ತಿಳಿದುಕೊಂಡ ಜ್ಞಾನ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಇಲ್ಲಿ ಮೊದಲು ಓದು ಆಮೇಲೆ ಪರೀಕ್ಷೆ, ಆದರೆ ಜೀವನದಲ್ಲಿ ಮೊದಲು ಪರೀಕ್ಷೆ ನಂತರ ಎಲ್ಲವೂ ಇರುತ್ತದೆ. ಕಲಿಯುವುದು, ತಿಳಿದುಕೊಳ್ಳುವುದು ನಿರಂತರವಾಗಿರಬೇಕು ಎಂದು ಹೇಳಿದರು.

ಓದಿ:ಪಠ್ಯ ಪುಸ್ತಕದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರ ಹೇಳಿಕೆ ಅಳವಡಿಕೆ ಬಗ್ಗೆ ನಂಗೆ ಗೊತ್ತಿಲ್ಲ: ಬಿ.ಸಿ. ನಾಗೇಶ್

Last Updated : May 16, 2022, 9:44 PM IST

ABOUT THE AUTHOR

...view details