ತುಮಕೂರು: ವಿಧಾನ ಪರಿಷತ್ ಚುನಾವಣೆ ಗೆಲುವಿಗಾಗಿ ಈಗಾಗಲೇ ಕಾರ್ಯತಂತ್ರ ರೂಪಿಸಲಾಗಿದ್ದು, ಜಿಲ್ಲೆಯ ಎಲ್ಲಾ ಮುಖಂಡರ ಜೊತೆ ಸಭೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎನ್ ಲೋಕೇಶ್ ಗೆಲ್ಲಲಿದ್ದಾರೆ. ಒಟ್ಟು 20 ಸ್ಥಾನಗಳಲ್ಲಿ ಹದಿನೈದು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ನಮಗಿದೆ ಎಂದರು.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಇದನ್ನೂ ಓದಿ:ಪರಿಷತ್ ಚುನಾವಣೆ: ಜೆಡಿಎಸ್ ಬೆಂಬಲದ ಬಗ್ಗೆ ಇಂದು ಅಥವಾ ನಾಳೆ ತಿಳಿಯಲಿದೆ ಎಂದ ಬಿಎಸ್ವೈ
ಎಸಿಬಿ ದಾಳಿ ಬಳಿಕ ಕಾನೂನು ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು. ಅಲ್ಪಾವಧಿಯಲ್ಲಿ ಚಾರ್ಜ್ ಶೀಟ್ ಹಾಕುವ ಹಾಗೆ ನಿಯಮ ರೂಪಿಸಲಾಗುವುದು. ಎಸಿಬಿ ಹೊರತುಪಡಿಸಿ ಲೋಕಾಯುಕ್ತ ಬಲಪಡಿಸುವ ಯೋಚನೆ ಇಲ್ಲ. ಎಸಿಬಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ:ಕೋವಿಡ್ ನಿಯಂತ್ರಣ, ಸೋಂಕಿನ ಹೊಸ ತಳಿ ಸಂಬಂಧ ಸಂಜೆ ಸಿಎಂ ಸಭೆ: ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ