ಕರ್ನಾಟಕ

karnataka

ETV Bharat / city

ತಿಪಟೂರಿನಲ್ಲಿ ಸತ್ಯ ಗಣಪತಿ ವಿಸರ್ಜನಾ ವೇಳೆ ಗೊಂದಲ ; ರಸ್ತೆಗೆ ಅಡ್ಡಲಾಗಿ ಬಿದ್ದ ಭಕ್ತರು

ತಿಪಟೂರಿನಲ್ಲಿ ಪ್ರಸಿದ್ಧ ಸತ್ಯ ಗಣಪತಿ ವಿಸರ್ಜನಾ ಕಾರ್ಯಕ್ರಮದ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಮಾರ್ಗ ಬದಲಾಯಿಸಲು ಸೂಚಿಸುತ್ತಿದ್ದಂತೆಯೇ ಭಕ್ತರು ರಸ್ತೆಯಲ್ಲಿ ಅಡ್ಡಲಾಗಿ ಬಿದ್ದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ..

tumkur ganesha immersion program
ತಿಪಟೂರಿನಲ್ಲಿ ಸತ್ಯ ಗಣಪತಿ ವಿಸರ್ಜನಾ ವೇಳೆ ಗೊಂದಲ; ರಸ್ತೆಗೆ ಅಡ್ಡಲಾಗಿ ಬಿದ್ದ ಭಕ್ತರು

By

Published : Nov 21, 2021, 10:53 PM IST

ತುಮಕೂರು: ತಿಪಟೂರಿನಲ್ಲಿ ಪ್ರಸಿದ್ಧ ಸತ್ಯ ಗಣಪತಿ ವಿಸರ್ಜನಾ ಕಾರ್ಯಕ್ರಮದ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಮಾರ್ಗ ಬದಲಾಯಿಸಲು ಸೂಚಿಸುತ್ತಿದ್ದಂತೆಯೇ ಭಕ್ತರು ರಸ್ತೆಯಲ್ಲಿ ಅಡ್ಡಲಾಗಿ ಬಿದ್ದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ತಿಪಟೂರಿನಲ್ಲಿ ಸತ್ಯ ಗಣಪತಿ ವಿಸರ್ಜನಾ ವೇಳೆ ಗೊಂದಲ ; ರಸ್ತೆಗೆ ಅಡ್ಡಲಾಗಿ ಬಿದ್ದ ಭಕ್ತರು

ಇತಿಹಾಸ ಪ್ರಸಿದ್ಧ 92ನೇ ಗಣೇಶ ಉತ್ಸವಕ್ಕೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಡಿವೈಎಸ್​ಪಿ ಸಿದ್ದಾರ್ಥ ಗೋಯಲ್ ಅವರ ವಿರುದ್ಧ ತಿರುಗಿ ಬಿದ್ದ ಭಕ್ತರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸ ಪಟ್ಟರು. ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ನಗರದಲ್ಲಿ ಒಂದು ರೀತಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ನಂತರ ಪೊಲೀಸರು ಹಾಗೂ ಸ್ಥಳೀಯರ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ. ನಿರ್ವಿಘ್ನವಾಗಿ ಗಣೇಶ ವಿಸರ್ಜನೆಗೆ ಭಕ್ತಮಂಡಳಿ ಸದಸ್ಯರು ಮುಂದಾದರು.

ABOUT THE AUTHOR

...view details