ಕರ್ನಾಟಕ

karnataka

ETV Bharat / city

ಸಮಗ್ರತೆ ದೃಷ್ಟಿಯಿಂದ ದೇಶದಲ್ಲಿ ಬುರ್ಕಾ ಬ್ಯಾನ್ ಮಾಡಬೇಕು: ಪ್ರಮೋದ್ ಮುತಾಲಿಕ್ - undefined

ಸಮಗ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ನಮ್ಮ ದೇಶದಲ್ಲಿಯೂ ಬುರ್ಕಾವನ್ನು ಬ್ಯಾನ್ ಮಾಡಬೇಕ. ಅವರ ಮನೆ, ಧಾರ್ಮಿಕ ಸ್ಥಳಗಳಲ್ಲಿ ಬುರ್ಕಾ ಇರಲಿ- ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್.

ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಮುಖ್ಯಸ್ಥ

By

Published : May 9, 2019, 8:06 PM IST

ತುಮಕೂರು: ಶ್ರೀಲಂಕಾದಲ್ಲಿ ಬ್ಯಾನ್ ಮಾಡಿರುವ ಹಾಗೆ ನಮ್ಮ ದೇಶದಲ್ಲಿಯೂ ಸಮಗ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಬುರ್ಕಾವನ್ನು ಬ್ಯಾನ್ ಮಾಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ತಿಪಟೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಚೌಕಟ್ಟಿನಲ್ಲಿ ಬುರ್ಕಾ ಇರಲಿ. ಅವರ ಮನೆ, ಧಾರ್ಮಿಕ ಸ್ಥಳಗಳಲ್ಲಿ ಬುರ್ಕಾ ಇರಲಿ. ಬುರ್ಕಾದ ಮೂಲಕ ಆಗುತ್ತಿರುವ ಅನಾಹುತ ತಡೆಯಲು ಅದನ್ನು ನಿಷೇಧ ಮಾಡಬೇಕು ಎಂದರು.

ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಮುಖ್ಯಸ್ಥ

ಶ್ರೀಲಂಕಾ ದುರಂತದಿಂದಾಗಿ ಶ್ರೀಲಂಕಾ ಬಹುಬೇಗನೆ ಎಚ್ಚೆತ್ತು‌ಕೊಂಡಿದೆ. ಚಿಕ್ಕರಾಷ್ಟವಾದರೂ ಬೇಗನೆ ಸೆಟೆದು ನಿಂತು ನಿಯಂತ್ರಣಕ್ಕೆ ತಂದಿದೆ. ಭಾರತದಲ್ಲೂ ಉಗ್ರರು ದಾಳಿ ನಡೆಸುವ ಭಯವಿದೆ. ಮೋದಿ ಸರ್ಕಾರದಲ್ಲಿ ಭಯೋತ್ಪಾದನೆ ಆಗಿಲ್ಲ ನಿಜ, ಆದರೆ ಮುಂದೆ ಆಗೋದಿಲ್ಲಾ ಅನ್ನೋ ಹಾಗಿಲ್ಲ ಎಂದರು.

For All Latest Updates

TAGGED:

ABOUT THE AUTHOR

...view details