ಕರ್ನಾಟಕ

karnataka

By

Published : Apr 6, 2021, 5:26 PM IST

ETV Bharat / city

ಅನುದಾನವಿಲ್ಲದೆ ತುಮಕೂರು ಜಿಲ್ಲೆ ಅನಾಥಾಶ್ರಮವಾಗಿದೆ: ಸಂಸದ ಬಸವರಾಜು

ಅನುದಾನವಿಲ್ಲದೆ ತುಮಕೂರು ಜಿಲ್ಲೆ ಒಂದು ರೀತಿಯ ಅನಾಥಾಶ್ರಮವಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಮುಂದಿನ ಸಪ್ಲಿಮೆಂಟರಿ ಬಜೆಟ್​ನಲ್ಲಿ ಪರಿಗಣಿಸಬೇಕು ಎಂದು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಹೇಳಿದರು.

BJP MP GS Basavaraju
ಸಂಸದ ಜಿ.ಎಸ್.ಬಸವರಾಜು

ತುಮಕೂರು:ಅನುದಾನವಿಲ್ಲದೆ ತುಮಕೂರು ಜಿಲ್ಲೆ ಅನಾಥಾಶ್ರಮವಾಗಿದೆ ಎಂದು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಬೇಸರ ವ್ಯಕ್ತಪಡಿಸಿದ್ದಾರೆ.

ಅನುದಾನವಿಲ್ಲದೆ ತುಮಕೂರು ಜಿಲ್ಲೆ ಅನಾಥಾಶ್ರಮವಾಗಿದೆ: ಸಂಸದ ಜಿ.ಎಸ್.ಬಸವರಾಜು

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಗೆ ಅನುದಾನ ಬಿಡುಗಡೆ ಸಂಬಂಧ ಯಡಿಯೂರಪ್ಪನವರು ಕೆಲ ಭಾಗದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಕುರಿತಂತೆ ನಾನೇ ಅವರ ಬಳಿ ಪ್ರಸ್ತಾಪ ಮಾಡಿದ್ದೇನೆ. ಸಾಮಾನ್ಯವಾಗಿ ನಾನು, ನನ್ನ ಊರು ಎಂಬ ಸ್ವಾರ್ಥವಿರುತ್ತದೆ. ಅದೇ ರೀತಿ ಶಿವಮೊಗ್ಗಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಕುರಿತಂತೆ ನನಗೂ ಕೂಡ ಅಸಮಾಧಾನವಿದೆ ಎಂದರು.

ಕಳೆದ ವರ್ಷ ಬಜೆಟ್​ನಲ್ಲಿ ಜಿಲ್ಲೆಗೆ ಮಂಜೂರಾದ 550 ಕೋಟಿ ರೂ. ಅನುದಾನವನ್ನು ಇದುವರೆಗೂ ಕೂಡ ಬಿಡುಗಡೆ ಮಾಡಿಲ್ಲ. ಬಜೆಟ್​ನಲ್ಲಿ ಹಣವಿಲ್ಲ ಎಂದು ಹೇಳುತ್ತಾರೆ, ಈ ರೀತಿ ಹೇಳಬಾರದು. ದುರದೃಷ್ಟವಶಾತ್ ಅನ್ಯಾಯವಾಗಿದೆ. ಬಿಜೆಪಿಯ 19 ಮಂದಿ ಲೋಕಸಭಾ ಸದಸ್ಯರು ಈ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಚರ್ಚೆ ನಡೆಸುತ್ತೇವೆ. ತುಮಕೂರು ಜಿಲ್ಲೆ ಒಂದು ರೀತಿ ಅನಾಥಾಶ್ರಮವಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಮುಂದಿನ ಸಪ್ಲಿಮೆಂಟರಿ ಬಜೆಟ್​ನಲ್ಲಿ ಪರಿಗಣಿಸಬೇಕು ಎಂದು ಹೇಳಿದರು.

ಓದಿ:ಬೆಳಗಾವಿಗೆ ತೆರಳಿದ ಸಿಎಂ: ನಾಳೆ ಮಂಗಳಾ ಅಂಗಡಿ ಪರ ಪ್ರಚಾರ

ABOUT THE AUTHOR

...view details