ಕರ್ನಾಟಕ

karnataka

ETV Bharat / city

ಯಾವುದೇ ಸಾಲ ಅರ್ಜಿಗಳನ್ನು ಬ್ಯಾಂಕುಗಳು ತಿರಸ್ಕರಿಸಬಾರದು ; ಪಾಲಿಕೆ ಆಯುಕ್ತೆ ರೇಣುಕಾ ಸೂಚನೆ

ಸಾಲ ಮಂಜೂರು ಮಾಡುವಾಗ ಮಧ್ಯವರ್ತಿಗಳೊಂದಿಗೆ ವ್ಯವಹರಿಸದೆ ಸಂಬಂಧಿಸಿದ ಫಲಾನುಭವಿಗಳೊಂದಿಗೆ ಮಾತ್ರ ವ್ಯವಹರಿಸಬೇಕು. ಬ್ಯಾಂಕಿನ ಅಧಿಕಾರಿಗಳಿಗೆ ಮಧ್ಯವರ್ತಿಗಳಿಂದ ಸಾಲ ಮಂಜೂರಾತಿಗಾಗಿ ಒತ್ತಡ ಬಂದಲ್ಲಿ ಕೂಡಲೇ ತಮಗೆ ದೂರು ನೀಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು..

ರೇಣುಕಾ ಸೂಚನೆ
ರೇಣುಕಾ ಸೂಚನೆ

By

Published : Feb 22, 2021, 7:18 PM IST

ತುಮಕೂರು :ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಹ ಫಲಾನುಭವಿಗಳು ಸಾಲಕ್ಕಾಗಿ ಸಲ್ಲಿಸುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸಬಾರದು ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ವಿವಿಧ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪಾಲಿಕೆ ಸಭಾಂಗಣದಲ್ಲಿಂದು ರಾಜ್ಯ/ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾಲಿಕೆ ಮೂಲಕ ಅನುಷ್ಠಾನವಾಗುವ ರಾಜ್ಯ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲಕ್ಕಾಗಿ ಸಲ್ಲಿಸುವ ಅರ್ಜಿಗಳನ್ನು ಅಗತ್ಯ ದಾಖಲೆಗಳ ಕೊರತೆ, ಮತ್ತಿತರ ಕಾರಣ ಹೇಳಿ ಹಿಂದಿರುಗಿಸಬಾರದು.

ದಾಖಲೆಗಳ ಅವಶ್ಯಕತೆ ಇದ್ದಲ್ಲಿ ಫಲಾನುಭವಿಗಳೊಂದಿಗೆ ಬ್ಯಾಂಕಿಗೆ ಭೇಟಿ ನೀಡಿ ಸಾಲ ಅರ್ಜಿಯನ್ನು ಅನುಸರಣೆ ಮಾಡಬೇಕೆಂದು ಈಗಾಗಲೇ ಯೋಜನಾನುಷ್ಠಾನಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅನುಷ್ಠಾನಾಧಿಕಾರಿಗಳು ಅಗತ್ಯ ದಾಖಲೆಗಳನ್ನು ಪೂರೈಕೆ ಮಾಡಿದ ನಂತರ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಬೇಕು ಎಂದರು.

ಸಾಲ ಮಂಜೂರು ಮಾಡುವಾಗ ಮಧ್ಯವರ್ತಿಗಳೊಂದಿಗೆ ವ್ಯವಹರಿಸದೆ ಸಂಬಂಧಿಸಿದ ಫಲಾನುಭವಿಗಳೊಂದಿಗೆ ಮಾತ್ರ ವ್ಯವಹರಿಸಬೇಕು. ಬ್ಯಾಂಕಿನ ಅಧಿಕಾರಿಗಳಿಗೆ ಮಧ್ಯವರ್ತಿಗಳಿಂದ ಸಾಲ ಮಂಜೂರಾತಿಗಾಗಿ ಒತ್ತಡ ಬಂದಲ್ಲಿ ಕೂಡಲೇ ತಮಗೆ ದೂರು ನೀಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾರ್ಚ್ 15ರೊಳಗೆ ಸಾಲ ಅರ್ಜಿ ವಿಲೇವಾರಿಗೆ ನಿರ್ದೇಶನ :ಪಾಲಿಕೆ ಅನುಷ್ಠಾನ ಮಾಡುವ ಡೇ-ನಲ್ಮ್ ಯೋಜನೆಯಡಿ 125 (ವೈಯಕ್ತಿಕ ಸಾಲ) ಫಲಾನುಭವಿಗಳಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ. ಸದರಿ ಅರ್ಜಿಗಳನ್ನು ಸಾಲ ಮಂಜೂರಾತಿಗಾಗಿ ಈಗಾಗಲೇ ಬ್ಯಾಂಕಿಗೆ ಸಲ್ಲಿಸಲಾಗಿದೆ. ಈ ಪೈಕಿ 10 ಅರ್ಜಿಗಳಿಗೆ ಬ್ಯಾಂಕಿನವರು ಸಾಲ ಮಂಜೂರು ಮಾಡಿದ್ದಾರೆ. 115 ಅರ್ಜಿಗಳು ಇನ್ನೂ ಬಾಕಿ ಇವೆ.

ಅದೇ ರೀತಿ ಗುಂಪು ಸಾಲದಡಿ ಸಲ್ಲಿಸಿರುವ 12 ಅರ್ಜಿಗಳ ಪೈಕಿ 2 ಅರ್ಜಿಗಳಿಗೆ ಮಾತ್ರ ಸಾಲ ಮಂಜೂರಾಗಿದೆ. ಉಳಿದ 10 ಅರ್ಜಿಗಳು ಬಾಕಿ ಹಾಗೂ ಬ್ಯಾಂಕ್ ಲಿಂಕೇಜ್ ಸಾಲದಡಿ ಸಲ್ಲಿಸಿರುವ 62 ಅರ್ಜಿಗಳ ಪೈಕಿ 3 ಅರ್ಜಿಗಳಿಗೆ ಸಾಲ ಮಂಜೂರಾಗಿದೆ. 59 ಅರ್ಜಿಗಳು ಬಾಕಿಯಿರುವುದರಿಂದ ಬ್ಯಾಂಕುಗಳು ಮಾರ್ಚ್ 15ರೊಳಗೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ನಿರ್ದೇಶನ ನೀಡಿದರು.

ABOUT THE AUTHOR

...view details