ತುಮಕೂರು :ದಲಿತ ಮುಖ್ಯಮಂತ್ರಿ (Dalit CM) ಮಾಡಬೇಕೆಂಬ ಹೇಳಿಕೆ ಕೇವಲ ಕಾಂಗ್ರೆಸ್ ಬೂಟಾಟಿಕೆ. ಡಾ. ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ತಿಳಿದು ಅವರನ್ನು ಬೇರು ಸಮೇತ ಕಿತ್ತೆಸೆಯುವ ಪ್ರಯತ್ನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ(B.Y.Vijayendra) ಕಾಂಗ್ರೆಸ್ ವಿರುದ್ಧ ಆರೋಪಿಸಿದರು.
ನಗರದಲ್ಲಿ ನಡೆದ ಜನಸ್ವರಾಜ್ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿ ಪರಮೇಶ್ವರ್ ಅವರನ್ನು ಸೋಲಿಸುವ ಯತ್ನ ಮಾಡಿದರು. ಇಂತಹ ಕಾಂಗ್ರೆಸ್ ಮುಖಂಡರು ದಲಿತ ಸಿಎಂ ಎನ್ನುತ್ತಾರೆ. ಎಲ್ಲಾ ಜಾತಿಗಳಿಗೆ ಸಮನಾದ ಅಧಿಕಾರ ನೀಡಿರುವುದು ಬಿಜೆಪಿ ಒಂದೇ ಎಂದರು.