ತುಮಕೂರು:ನಾನು ಬಹುತೇಕ ತಿಪಟೂರಿನಿಂದ ಬೆಂಗಳೂರಿನ ಕಡೆಗೆ ರೈಲಿನಲ್ಲಿಯೇ ಓಡಾಡುವುದು ಹೀಗಾಗಿ ರೈಲು ಪ್ರಯಾಣಿಕರ ಸಮಸ್ಯೆಗಳು ಚೆನ್ನಾಗಿ ಅರಿತಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ತುಮಕೂರಿನ ರೈಲು ನಿಲ್ದಾಣದಲ್ಲಿ ತುಮಕೂರು ಅರಸೀಕೆರೆ ಮಾರ್ಗದ ವಿದ್ಯುತ್ ಚಾಲಿತ ಡೆಮೋ ರೈಲು ಸೇವೆಗೆ ಚಾಲನೆ ಮಾತನಾಡಿದ ಅವರು, ವಿದ್ಯುತ್ ಸಮಸ್ಯೆ ಅಗಾಧವಾಗಿದೆ. ಈ ನಡುವೆ ವಿದ್ಯುತ್ ರೈಲು ಮಾರ್ಗವನ್ನು ಸಾರ್ವಜನಿಕರಿಗೆ ನೀಡಿರುವ ಮೋದಿ ಸರ್ಕಾರ ನಿಜಕ್ಕೂ ಶ್ಲಾಘನೆಗೆ ಪಾತ್ರವಾಗಿದೆ ಎಂದರು.
ವಿದ್ಯುತ್ ಚಾಲಿತ ಡೆಮೋ ರೈಲು ಸೇವೆಗೆ ಚಾಲನೆ ನೀಡಿದ ಬಿ.ಸಿ.ನಾಗೇಶ್
ತುಮಕೂರಿನ ರೈಲು ನಿಲ್ದಾಣದಲ್ಲಿ ತುಮಕೂರು ಅರಸೀಕೆರೆ ಮಾರ್ಗದ ವಿದ್ಯುತ್ ಚಾಲಿತ ಡೆಮೋ ರೈಲು ಸೇವೆಗೆ ಚಾಲನೆ ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ಸೇವೆಗೆ ಕಾರಣಕರ್ತರಾದ ಪ್ರಧಾನಿ ಮೋದಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
24 ಗಂಟೆ ವಿದ್ಯುತ್ ನೀಡಿದರೆ ಸಾಕು ಎಂಬಂತಹ ಸ್ಥಿತಿಯಲ್ಲಿ ಸರ್ಕಾರ ಇದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಚಾಲಿತ ರೈಲುಗಳನ್ನು ಪರಿಚಯಿಸಿರುವುದು ಸಂತಸದ ವಿಚಾರವಾಗಿದೆ. ಡಬಲ್ ನೈನ್ ಪ್ರಾಜೆಕ್ಟ್ ಅರಸೀಕೆರೆ ಹಾಗೂ ಬೆಂಗಳೂರು ನಡುವೆ ಕನಸು ಎಂಬಂತಾಗಿತ್ತು, ಆದರೆ, 2018 ರಲ್ಲಿ ಆರಂಭವಾದ ಕಾಮಗಾರಿ 2022ರ ಬೆಳಗ್ಗೆ ಪೂರ್ಣಗೊಂಡವು, ಈಗ ಲೋಕಾರ್ಪಣೆಗೊಂಡಿದೆ. ಇದು ಮೋದಿಯವರ ದೇಶಕ್ಕೆ ಅಭಿವೃದ್ಧಿಪರ ಚಿಂತನೆಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್. ಬಸವರಾಜು ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ :ಜನರ ಮುಂದೆ ಪರಿಷ್ಕೃತ ಪಠ್ಯ ಇಡುತ್ತೇವೆ, ತಪ್ಪಿದ್ದಲ್ಲಿ ತಿದ್ದುತ್ತೇವೆ: ಸಚಿವ ನಾಗೇಶ್