ತುಮಕೂರು:ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಸೋಮಲಾಪುರ ಗ್ರಾಮದ ಪಂಚಾಕ್ಷರಿ, ಜಯರಾಮಯ್ಯ, ನಟರಾಜು ಅವರಿಗೆ ಸೇರಿದ ಅಡಿಕೆ ಸಸಿಗಳನ್ನು ಕಿಡಿಗೇಡಿಗಳು ಶನಿವಾರ ರಾತ್ರಿ ಕಡಿದು ಹಾಕಿದ್ದಾರೆ.
ತುಮಕೂರು: ನೂರಾರು ಅಡಿಕೆ ಸಸಿ ಕಡಿದುಹಾಕಿ ಕಿಡಿಗೇಡಿಗಳ ವಿಕೃತಿ - ತುಮಕೂರು ಲೇಟೆಸ್ಟ್ ಅಪ್ಡೇಟ್ ನ್ಯೂಸ್
ಅಡಿಕೆ ಸಸಿಗಳನ್ನು ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಅಡಿಕೆ ಸಸಿ ಕಡಿದ ಕಿಡಿಗೇಡಿಗಳು
ಅಂದಾಜು 100 ಸಸಿಗಳನ್ನು ಕಡಿದಿದ್ದಾರೆ. ಕಳೆದ ರಾತ್ರಿ ನಡೆದ ಘಟನೆ, ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಸೋಮಲಾಪುರದ ಕಂಬದ ನರಸಿಂಹ ಸ್ವಾಮಿ ದೇವಸ್ಥಾನದ ದಾರಿಗೆ ತೊಂದರೆಯಾಗಿದ್ದರಿಂದ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.