ತುಮಕೂರು :ಈ ಊರಿನ ಮುಸ್ಲಿಮರು ಆಂಜನೇಯಸ್ವಾಮಿಯ ರಥ ಎಳೆಯುತ್ತಾರೆ, ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಧಾರ್ಮಿಕ ಭೇದ ಬಾವಗಳಿಲ್ಲದೇ ಸಾಮರಸ್ಯದಿಂದ ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ವೈವಿಧ್ಯತೆಯಲ್ಲಿ ಭಾವೈಕ್ಯತೆಯನ್ನು ಈ ಗ್ರಾಮ ಸಾರುತ್ತಿದೆ.
ತುಮಕೂರು ಜಿಲ್ಲೆಯಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ಭಾವೈಕ್ಯತೆ ಕಾಣಬಹುದಾಗಿದೆ. ರಥೋತ್ಸವ ಜರುವ ದಾರಿಯಲ್ಲಿ ಮಸೀದಿ ದೊರೆಯುತ್ತದೆ. ಅಲ್ಲಿ ಮುಸ್ಲಿಂ ಬಾಂಧವರು ಆಂಜನೇಯ ಸ್ವಾಮಿಗೆ ವಿಶೇಷ ಅರ್ಚನೆ ಮಾಡಿಸುತ್ತಾರೆ. ಅಲ್ಲದೇ ಆಂಜನೇಯ ಸ್ವಾಮಿ ರಥವನ್ನು ಸಹ ಎಳೆಯತ್ತಾರೆ.