ತುಮಕೂರು:ಜಾಹೀರಾತು ಏಜೆನ್ಸಿಗಳ ನಡುವಿನ ಪೈಪೋಟಿಯಿಂದ ನಗರದ ಬಿ.ಹೆಚ್ ರಸ್ತೆಯಲ್ಲಿ ಮರಗಳು ಬಲಿಯಾಗುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಬಿ.ಹೆಚ್ ರಸ್ತೆಯ ಮಧ್ಯಭಾಗದಲ್ಲಿ ಇರುವ ಸ್ಥಳದಲ್ಲಿ ಜಾಹೀರಾತು ಅಳವಡಿಸಲು ಏಜೆನ್ಸಿಗಳಿಗೆ ತುಮಕೂರು ಮಹಾನಗರಪಾಲಿಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಇದಕ್ಕಾಗಿ ಈಗಾಗಲೇ ಪಾಲಿಕೆ ವತಿಯಿಂದ ಟೆಂಡರ್ ಕೂಡ ಕರೆಯಲಾಗಿತ್ತು ಎಂಬ ಮಾಹಿತಿ ಇದೆ.
ಅದರಂತೆ ಬೆಂಗಳೂರು ಮೂಲದ ಸಂಸ್ಥೆಯೊಂದು ತನ್ನ ಹಕ್ಕನ್ನು ಪಡೆದಿತ್ತು. ಆದರೆ ಜಾಹೀರಾತು ಫಲಕಗಳನ್ನು ಅಳವಡಿಸಲು ಮತ್ತೊಂದು ಸಂಸ್ಥೆ ಪೈಪೋಟಿ ನಡೆಸಿತ್ತು. ಈ ನಡುವೆ ಮೊದಲು ಹಕ್ಕು ಪಡೆದಿರುವ ಸಂಸ್ಥೆಗೆ ಕೆಟ್ಟ ಹೆಸರು ತರಲು ಮತ್ತೊಂದು ಸಂಸ್ಥೆ ಜಾಹೀರಾತುಗಳನ್ನು ಅಳವಡಿಸುವ ಸ್ಥಳದಲ್ಲಿರುವ ಮರಗಳನ್ನು ಕಡಿದು ಹಾಕುವ ಮೂಲಕ ತಮ್ಮ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದೆ ಎಂದು ಜಾಹೀರಾತು ಸಂಸ್ಥೆಯ ಮಾಲೀಕ ರಂಗನಾಥ ಆರೋಪಿಸಿದ್ದಾರೆ.