ಕರ್ನಾಟಕ

karnataka

ETV Bharat / city

ತುಮಕೂರಿನಲ್ಲಿ ಚಂಡಿಕಾ ಹೋಮ ನೆರವೇರಿಸಿದ ನಟ ಪ್ರೇಮ್ - ತುಮಕೂರು

ಪತ್ನಿ ಹಾಗೂ ಪುತ್ರಿಯೊಂದಿಗೆ ಶ್ರೀ ದುರ್ಗಾದೇವಿ ದೇವಾಲಯಕ್ಕೆ ಭೇಟಿ ನೀಡಿದ ನಟ ಪ್ರೇಮ್, ಋತ್ವಿಕರ ನೇತೃತ್ವದಲ್ಲಿ ಚಂಡಿಕಾ ಹೋಮ ನೆರವೇರಿಸಿ ಪೂರ್ಣಾಹುತಿ ಅರ್ಪಿಸಿದರು.

tumkur
ಚಂಡಿಕಾ ಹೋಮ ನೆರವೇರಿಸಿದ ನಟ ಪ್ರೇಮ್

By

Published : Oct 15, 2021, 10:04 PM IST

ತುಮಕೂರು: ನಗರದ ಹೊರವಲಯದ ಊರುಕೆರೆಯಲ್ಲಿ ಶ್ರೀ ದುರ್ಗಾದೇವಿ ದೇವಾಲಯಕ್ಕೆ ಖ್ಯಾತ ಚಿತ್ರನಟ ನೆನಪಿರಲಿ ಪ್ರೇಮ್ ಭೇಟಿ ನೀಡಿ, ಚಂಡಿಕಾ ಹೋಮ ನೆರವೇರಿಸಿದ್ದಾರೆ.

ತುಮಕೂರಿನಲ್ಲಿ ಚಂಡಿಕಾ ಹೋಮ ನೆರವೇರಿಸಿದ ನಟ ಪ್ರೇಮ್

ಪ್ರತಿ ವರ್ಷ ನವರಾತ್ರಿಯ ಸಮಯದಲ್ಲಿ ಊರುಕೆರೆಯ ಶ್ರೀ ದುರ್ಗಾದೇವಿ ದೇವಾಲಯಕ್ಕೆ ಪ್ರೇಮ್ ಭೇಟಿ ನೀಡುತ್ತಾರೆ. ಈ ಬಾರಿ ತಮ್ಮ ಪತ್ನಿ ಹಾಗೂ ಪುತ್ರಿಯೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ ಅವರು ಋತ್ವಿಕರ ನೇತೃತ್ವದಲ್ಲಿ ಚಂಡಿಕಾ ಹೋಮ ನೆರವೇರಿಸಿ ಪೂರ್ಣಹುತಿ ಅರ್ಪಿಸಿದರು. ಹೋಮಕ್ಕೆ ನವ ಧಾನ್ಯಗಳು, ಮಂಗಳ ದ್ರವ್ಯ, ತೆಂಗಿನಕಾಯಿ, ಕೊಬ್ಬರಿ ರೇಷ್ಮೆ ಸೀರೆ ಹಾಗೂ ವಿವಿಧ ರೀತಿಯ ಸಂಹಿತ್ತುಗಳನ್ನು ಆಹುತಿ ನೀಡಲಾಯಿತು.

ಬಳಿಕ ಮಾತನಾಡಿದ ಪ್ರೇಮ್ ಪ್ರತೀ ವರ್ಷ ಊರುಕೆರೆಯ ಶ್ರೀ ದುರ್ಗಾದೇವಿ ದೇವಾಲಯಕ್ಕೆ ನವರಾತ್ರಿಯ ಸಂದರ್ಭದಲ್ಲಿ ಭೇಟಿ ನೀಡುವ ಪರಿಪಾಠವನ್ನು ರೂಢಿಸಿಕೊಂಡಿದ್ದೇನೆ. ಅಂತೆಯೇ ಈ ಬಾರಿಯೂ ಸಹ ದೇವಾಲಯಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದೇನೆ ಎಂದರು.

ವಿಶೇಷವೆಂದರೆ ಈ ಬಾರಿ ನವರಾತ್ರಿಯ ಸಂದರ್ಭದಲ್ಲಿ ಚಂಡಿಕಾ ಹೋಮ ನೆರವೇರಿಸುವ ಅವಕಾಶ ಒದಗಿ ಬಂದಿದೆ. ಈ ಅವಕಾಶ ನೀಡಿದ ದೇವಾಲಯದ ಆಡಳಿತ ಮಂಡಳಿ ಹಾಗೂ ತಮ್ಮ ಸ್ನೇಹಿತರಿಗೆ ಧನ್ಯವಾದ ಅರ್ಪಿಸಿದರು.

ABOUT THE AUTHOR

...view details